ಬರಗೂರು
ಸಿದ್ದಗಂಗಾ ಮಠದ ಪಿಠಾಧ್ಯಕ್ಷರಾದ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಯಾವುದೇ ಜಾತಿ ಭೇದ ಮತಕ್ಕೆ ಮಾನ್ಯತೆ ನೀಡದೆ ಅಪಾರ ಭಕ್ತರ ದೇವರಾಗಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಆರ್.ಜಯರಾಮಯ್ಯ ಹೇಳಿದರು.
ಸಿರಾ ತಾಲ್ಲೂಕಿನ ಬರಗೂರು ಬಸ್ ನಿಲ್ದಾಣದಲ್ಲಿ ಭಕ್ತರು ಏರ್ಪಡಿಸಿದ್ದ ತ್ರಿವಿಧ ದಾಸೋಹಿ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಪುಣ್ಯ ಸ್ಮರಣೆ ಸಂದರ್ಭ ಶ್ರೀಗಳಿಗೆ ಭಕ್ತಿನಮನ ಸಮರ್ಪಿಸಿ ಮಾತನಾಡಿದರುಶ್ರೇಷ್ಠವಾದ ಅನ್ನದಾನ ಮಾಡಿದ ಶ್ರೀಗಳು ಅಪಾರ ಭಕ್ತರನ್ನು ಪಡೆದು ಬಡ ಮಕ್ಕಳಿಗೆ ಅಕ್ಷರ ಅನ್ನದಾಸೋಹ ಮಾಡುವ ಮೂಲಕ ಸಮಾಜ ಸುಧಾರಣೆ ಮಾಡಿದ ಸೇವೆ ಅಪಾರವಾಗಿದ್ದಾರೆ. ಆಧ್ಯಾತ್ಮದ ಮಹತ್ವವನ್ನು ಪ್ರತಿ ಮಾನವರಲ್ಲಿ ಉಣಬಡಿಸಿ ಶ್ರೀಗಳು ಇಂದಿಗೂ ನಮ್ಮಲ್ಲೇ ಇದ್ದಾರೆ.
ಅವರು ನೀಡಿದ ಈ ಸೇವೆಯ ಮೂಲಕ ಪ್ರತಿಯೊಬ್ಬರಲ್ಲೂ ಶ್ರೀಗಳನ್ನು ಕಾಣಲುಬಹುದು. ಪರಮಪೂಜ್ಯ ಶ್ರೀಗಳು ಮಹಾನ್ ಚೇತನರು ಎಂದರು.ವೀರಶೈವ ಸಾಮಾಜದ ಮುಂಖಂಡರಾದ ವೀರಭದ್ರಸ್ವಾಮಿ, ರೇಣುಕಾ ಪ್ರಸಾದ್, ಭರತ್ ಬಿ.ಎನ್. ತಿಪ್ಪೇಸ್ವಾಮಿ, ಎಂ.ಎನ್.ನಾಗರಾಜು, ಹೆಚ್.ಭದ್ರಯ್ಯ, ಅಂಗಡಿ ಸುಮಗಂಗಧಾರ್, ಹೋಟಲ್ ರಾಜಶೇಖರ್, ಮಹಂತೇಶ್, ಶಶಿ, ಬಾಳಪ್ಪ, ಮೆಕಾನಿಕ್ ಬಿಸಿ. ಬಸವರಾಜು, ನಾಗಪ್ಪ, ಭಗವಂತಪ್ಪ, ಕರವೇ ಅಧ್ಯಕ್ಷ ಲತೀಫ್, ಮುಭಾರಕ್, ಪೂಜಾರ್ ಶಿವಕುಮಾರ್, ಬಸವರಾಜು, ಶಾಂತರಾಜು, ಬಸವರಾಜು, ಡಾ ಶ್ರೀಶ್ರೀ ಶಿವಕುಮಾರ ಅಪಾರ ಭಕ್ತರು ಶಿವಕುಮಾರ ಮಹಾಸ್ವಾಮೀಜಿಯವರ ಭಾವ ಪೂರ್ಣ ಪುಣ್ಯ ಸ್ಮರಣೆಯಲ್ಲಿ ಸಾಮೂಹಿಕವಾಗಿ ಭಕ್ತರಿಗೆ ಪ್ರಸಾದ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
