ಮಣಿಪಾಲ್ ಸಂಸ್ಥೆ ವಂಚನೆ ಪ್ರಕರಣ : ಆರೋಪಿ ಜಾಮೀನು ಅರ್ಜಿ ವಜಾ

ಬೆಂಗಳೂರು

     ಪ್ರತಿಷ್ಟಿತ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಸಂಸ್ಥಾಪಕ ಅಧ್ಯಕ್ಷ ಡಾ. ರಂಜನ್ ಪೈ ಮತ್ತು ಶೃತಿ ಪೈಗೆ 52 ಕೋಟಿ ವಂಚನೆ ಪ್ರಕರಣದ ಅರೋಪಿಗಳಿಗೆ ಜಾಮೀನು ನೀಡಲು ನಗರದ ಸಿಸಿಹೆಚ್ ನ್ಯಾಯಾಲಯ ನಿರಾಕರಿಸಿದೆ
ಡಾ.ರಂಜನ್ ಪೈ ಮತ್ತು ಶೃತಿ ಪೈಗೆ 52 ಕೋಟಿ ರೂ. ವಂಚಿಸಿದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಸಿಹೆಚ್ 61 ನೇ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಜಾಮೀನು ನೀಡಲು ನಿರಾಕರಿಸಿದ್ದು ಇದರಿಂದ ಆರೋಪಿಗಳಾದ ವಿಶಾಲ್ ಸೋಮಣ್ಣ ಚೆಂಗಪ್ಪ, ಅಮ್ರಿತಾ ಚೆಂಗಪ್ಪ,ಮೀರಾ ಚೆಂಗಪ್ಪ ಅವರಿಗೆ ಜೈಲು ಶಿಕ್ಷೆಯೇ ಗತಿಯಾಗಿದೆ.

       ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಸರ್ಕಾರಿ ಪರ ವಕೀಲರಾದ ಶೈಲಜಾ ಕೃಷ್ಣಾ ನಾಯಕ್ ಅವರು ವಾದ ಮಂಡಿಸಿ, ಇದರಲ್ಲಿ 52 ಕೋಟಿ ರೂ. ಹಣದ ವಂಚನೆಯಾಗಿದ್ದು ಪ್ರಕರಣದ ಮತ್ತೊಬ್ಬ ಅರೋಪಿಯ ಬಂಧನ ಸಹ ಬಾಕಿ ಇದೆ ಎಂದರು.
ಜಾಮೀನು ನೀಡಿದರೆ ಮತ್ತೊಬ್ಬ ಆರೋಪಿಯು ದೇಶಕ್ಕೆ ವಾಪಸಾಗುವುದಿಲ್ಲ ಅಲ್ಲದೇ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹಾಜರಾಗವುದು ಅನುಮಾನವಿದೆ ಹಾಗಾಗಿ ಜಾಮೀನು ನೀಡಬಾರದು.ಈ ಪ್ರಕರಣವು ಜೀವಾವಧಿ ಶಿಕ್ಷೆ ಕೊಡುವಂತಹ ಪ್ರಕರಣವಾಗಿದೆ ಎಂದು ವಾದ ಮಂಡಿಸಿದರು.

         ವಾದವನ್ನು ಆಲಿಸಿದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಮಾಡಿದ್ದಾರೆ.ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ, ಹಿರಿಯ ವಕೀಲರಾದ ಸಿ.ವಿ ನಾಗೇಶ್‍ರನ್ನು ವಕೀಲರನ್ನಾಗಿ ನೇಮಕ ಮಾಡಿ ಆದೇಶ ಮಾಡಿದೆ.

ಬಹುಕೋಟಿ ವಂಚನೆ

         ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯ ಜೆ ಡಬ್ಲ್ಯೂ ಮೆರಿಯಟ್‍ನಲ್ಲಿರುವ ಮಣಿಪಾಲ್ ಎಜುಕೇಷನ್ ಮತ್ತು ಮೆಡಿಕಲ್ ಗ್ರೂಪ್ ಹಾಗೂ ಮಣಿಪಾಲ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‍ನ ಫೈನಾನ್ಸ್ ಡಿಪಾರ್ಟ್‍ಮೆಂಟ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂದೀಪ್ ಗುರುರಾಜ್ ಮಾಲೀಕನಿಗೆ ಬರೋಬ್ಬರಿ 62 ಕೋಟಿ ರೂ. ವಂಚಿಸಿರುವ ಪ್ರಕರಣ ಇದಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಛೇರ್ಮನ್ ಡಾ. ರಂಜನ್ ಪೈ ಮತ್ತು ಶೃತಿ ಪೈ ಅಕೌಂಟ್‍ನಿಂದ ಬರೋಬ್ಬರಿ 62 ಕೋಟಿ ರೂ. ಹಣವನ್ನು ಟ್ರಾನ್ಸಫರ್ ಮಾಡಿಕೊಂಡು ವಂಚಿಸಿದ್ದಾನೆ.

        ಇನ್ನೂ ಆರೋಪಿ ಸಂದೀಪ್ ಗುರುರಾಜ್ ಕಳೆದ ಕೆಲ ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಕಂಪನಿಯ ವ್ಯವಹಾರದ ಜೊತೆಗೆ ಮಣಿಪಾಲ್ ಛೇರ್ಮನ್ ರಂಜನ್ ಕುಟುಂಬದ ಸಂಪೂರ್ಣ ವ್ಯವಹಾರವನ್ನು ಸಹ ನೋಡಿಕೊಳ್ಳುತ್ತಿದ್ದ. ಮನೆಯವರಿಗೆ ಖರ್ಚಿಗೆ ಹಣ ಬೇಕಾದರೂ ಸಹ ಇವನೇ ಕೊಡುವ ಮಟ್ಟಕ್ಕೆ ನಂಬಿಕೆಯನ್ನು ಗಳಿಸಿಕೊಂಡು ಕೋಟಿ ಕೋಟಿ ಹಣದ ವ್ಯವಹಾರ ನೋಡಿಕೊಳ್ಳುತ್ತಿರುವುದು ಇತ್ತೀಚೆಗೆ ಬಯಲಾಗಿದೆ.

ಮಿಮಿಕ್ರಿ ಮಾಡಿ ಕೃತ್ಯ

         ಡಾ. ರಂಜನ್ ಪೈಗೆ ಐಡಿಬಿಐ ಓವರ್ ಸಿಸ್ ಬ್ಯಾಂಕ್‍ನಿಂದ ಕರೆಯೊಂದು ಬಂದಿದೆ. ನಿಮ್ಮ ಅಕೌಂಟ್ ನಿಂದ 70 ಕೋಟಿ ಹಣ ವರ್ಗಾವಣೆಗೆ ನೀವು ಮಾಡಿರುವ ಆದೇಶದ ವಾಯ್ಸ್ ಮ್ಯಾಚ್ ಆಗುತ್ತಿಲ್ಲವೆಂದು ಹೇಳಿದ್ದಾರೆ.ಇದನ್ನು ಕೇಳಿ ಅಘಾತಕ್ಕೊಳಗಾದ ರಂಜನ್ ಚೆಕ್ ಮಾಡಿದಾಗ ತನ್ನ ನಂಬಿಕಸ್ಥ ಮ್ಯಾನೇಜರ್ ಮುಖವಾಡ ಬಯಲಾಗಿದೆ. ತನ್ನ ಮಾಲೀಕ ರಂಜನ್ ಧ್ವನಿ ಮಿಮಿಕ್ರಿ ಮಾಡಿ 62 ಕೋಟಿಯಷ್ಟು ಹಣವನ್ನು ಟ್ರಾನ್ಸಫರ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

         ಒಟ್ಟಿನಲ್ಲಿ ಪ್ರೇಯಸಿ ಹಾಗೂ ಪತ್ನಿಯ ಉದ್ದಾರ ಮಾಡಲು ಹೋಗಿ ಮ್ಯಾನೇಜರ್ ಸಂದೀಪ್ ಗುರುರಾಜ್ ಜೈಲು ಸೇರಿದ್ದಾನೆ. ಇತ್ತ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಮತ್ತೊಬ್ಬ ಆರೋಪಿ ವಿಶಾಲ್ ಸೋಮಣ್ಣ ಚೆಂಗಪ್ಪನನ್ನು ಬಂಧಿಸಲು ಮುಂದಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link