ಕಾಲ್ಪನಿಕ ವೇತನ ವರದಿ ಜಾರಿಗೆ ಒತ್ತಾಯ

ಬೆಂಗಳೂರು

         ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ವೇತನ ಜಾರಿ ಸಂಬಂಧ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸದನ ಉಪಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿ ಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಅನುದಾನಿತ ಶಾಲಾ ಶಿಕ್ಷಕರು ಆಗ್ರಹಿಸಿದ್ದಾರೆ.

         ನಗರದ ಕೆಜಿ ರಸ್ತೆಯ ಶಿಕ್ಷಕರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶೈಕ್ಷಣಿಕ ಸಮಾವೇಶ ಹಾಗೂ ನಿವೃತ್ತ, ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು ಪ್ರಸ್ತುತ ಸಾಲಿನ ಬಜೆಟ್‍ನಲ್ಲೇ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸದನ ಉಪಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ತಹಿಸಿದರು.

       ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ, ಮಕ್ಕಳ ಅನುಪಾತವನ್ನು ಪೂರ್ವ ಪ್ರಾಥಮಿಕಕ್ಕಿರುವಂತೆ, 20:1 ಅಥವಾ ಪ್ರೌಢ ಶಾಲೆಗಳಿಗಿರುವ 25:1 ನ್ನಾಗಲಿ ನಿಗಧಿಗೊಳಿಸಬೇಕು. ಅದೇ ರೀತಿಯಲ್ಲಿ, ಸೇವೆಗೆ ಸೇರಿದ ದಿನದಿಂದಲೇ, ಕಾಲ್ಪನಿಕ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

          ಸರ್ಕಾರಿ ಶಾಲೆಗಳಿಗೆ ನೀಡಿರುವ ಮಕ್ಕಳ ವಿನಾಯಿತಿಯಾದ 19 ಮಕ್ಕಳಿದ್ದರೂ, ಒಬ್ಬ ಶಿಕ್ಷಕನನ್ನು ಉಳಿಸುವಂತಹ ಮತ್ತು ಅಂತಹ ಶಾಲೆಗಳನ್ನು ಶೂನ್ಯ ಶಾಲೆಗಳನ್ನಾಗಿಸದೆ, ಉಳಿಸಬೇಕೆಂದು ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ ಅವರು ಮನವಿ ಮಾಡಿದರು.

        ಸಂಘದ ರಾಜ್ಯ ಕಾರ್ಯದರ್ಶಿ ಟಿ.ರವಿಕುಮಾರ್ ಮಾತನಾಡಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಡಿಸೆಂಬರ್ ತಿಂಗಳಿನಿಂದ ವೇತನ ಸಿಗದಾಗಿದ್ದು, ಶಿಕ್ಷಕ ವೃಂದ ಸಂಕಷ್ಟಕ್ಕೆ ಸಿಲುಕಿದೆ.ಈ ಕುರಿತು ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಅನೇಕ ಬಾರಿ ತಾಲೂಕಾ ಪಂಚಾಯತದಿಂದ ಹಿಡಿದು ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ, ಉಪನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿಯಾದರು ಇದುವರೆಗೆ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ. ಅವರಿಂದ ಸಮರ್ಪಕವಾದ ಉತ್ತರವಿಲ್ಲದೆ ಒಬ್ಬರ ಮೇಲೆ ಒಬ್ಬರು ಕುಂಟು ನೆಪಗಳನ್ನು ಹೇಳುತ್ತಾ ಸಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

         ಆದ್ದರಿಂದ, ಶಿಕ್ಷ ಕರು ವೇತನವಿಲ್ಲದೆ ತಿಂಗಳುಗಳು ಕಳೆಯುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವೇತನ ಬಿಡುಗಡೆಗೆ ಕ್ರಮ ಜರುಗಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಅವರ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

        ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ,ಡಿ.ಸಿ.ಗೋಪಿನಾಥ್, ವಕೀಲ ಆರ್.ಪದ್ಮನಾಭ್, ಜಿಲ್ಲಾಧ್ಯಕ್ಷ ಸಿ.ಮಲ್ಲಿಕಾರ್ಜುನ,ಕಾರ್ಯದರ್ಶಿ ಎ.ಕೆ.ರಾಜುರಾಜು, ಬೆಂ.ದಕ್ಷಿಣ ಜಿಲ್ಲಾ ಕಾರ್ಯಕಾರಿ ಸಮಿತಿ ಗೌ.ಕಾರ್ಯಾಧ್ಯಕ್ಷ ಸೋ.ಫಾಲನೇತ್ರ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link