ಬೆಂಗಳೂರು:
ಸೆಣಸಾಡಿದರೆ ಬಲಿಷ್ಠರೊಂದಿಗೆ ಸೆಣಸಾಡಬೇಕು. ನಾನು ಬಲಶಾಲಿಗಳ ಜೊತೆ ಸೆಣಸಾಡಿ ಯಶಸ್ವಿಯಾಗುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಆ ಮೂಲಕ ಬೆಂಗಳೂರು ಉತ್ತರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬೆಂಗಳೂರು ಉತ್ತರದಲ್ಲಿ ನಮಗೆ ಹಿನ್ನಡೆ ಆಗಿತ್ತು. ಆ ದೋಷಗಳನ್ನು ಸರಿಪಡಿಸಿಕೊಂಡು ಮುಂದುವರೆಯುತ್ತೇವೆ ಎಂದರು.
ಸಿಎಂಗೆ ಬಜೆಟ್ ಮಂಡಿಸುವ ಸಂದರ್ಭ ಸಿಗುತ್ತೋ ಇಲ್ವೋ? ನೋಡೋಣ ಕುಮಾರಸ್ವಾಮಿ ಎಂಥಾ ಬಜೆಟ್ ಕೊಡ್ತಾರೆ.? ಎಂದು ಎಚ್ಡಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟಾಂಗ್ ನೀಡಿದರು. ಕೇಂದ್ರದ ಬಜೆಟ್ನ್ನು ಚುನಾವಣಾ ಬಜೆಟ್ ಎಂದು ಕುಮಾರಸ್ವಾಮಿ ಟೀಕಿಸಿದ್ದರು. ಅಂತಹ ಸನ್ನಿವೇಶ ಸಮ್ಮಿಶ್ರ ಸರ್ಕಾರದಲ್ಲಿ ಸೃಷ್ಟಿಯಾಗಿದೆ. ಅವರಲ್ಲಿ ‘ಕೈ’ ಶಾಸಕರು ರಾಜೀನಾಮೆ ಕೊಡ್ತಾರೆಂಬ ಭೀತಿ ಇದೆ ಎಂದು ವ್ಯಂಗ್ಯ ಮಾಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ