ಶ್ರೀನಗರ: 

ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಜಾಲವನ್ನು ಭಾರತೀಯ ಸೈನಿಕರು ಬೇಧಿಸಿದ್ದಾರೆ, ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ್ದಾರೆ ಈ ದಾಳಿಯಲ್ಲಿ ಮೂವರು ಉಗ್ರರನ್ನು ಸೈನಿಕರು ಬಂಧಿಸಿದ್ದಾರೆ.
ಬಾರಾಮುಲ್ಲ ಸೆಕ್ಟರ್ ನ ಸೋಪೋರ್ ನಲ್ಲಿ ಈ ದಾಳಿ ನಡೆದಿದ್ದು, ಬಂಧಿತ ಉಗ್ರರನ್ನು ಗುಲಾಮ್ ಖಾದಿರ್ ಅಲಿಯಾಸ್ ಕಾಸಿರ್, ಏಜಾಜ್ ಅಹ್ಮದ್ ಖಾನ್ ಮತ್ತು ಒವಾಯಿಸ್ ಖಾಲಿದ್ ದಾರ್ ಎಂದು ಗುರುತಿಸಲಾಗಿದೆ. ಮೂವರು ಕಳೆದ ಹಲವು ವರ್ಷಗಳಿಂದ ಜೆಇಎಂ ಉಗ್ರಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
