ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳರು…!!!

ಬೆಂಗಳೂರು

         ಸಿಂಗಂ ಚಿತ್ರವನ್ನು ನೋಡಿ ಅದರಲ್ಲಿನ ಕಳವಿನ ದೃಶ್ಯದಂತೆ ಒಂದೇ ರಾತ್ರಿಯಲ್ಲಿ ಮೂರು ಮೊಬೈಲ್ ಅಂಗಡಿಗಳಿಗೆ ನುಗ್ಗಿ ಕಳ್ಳತನವೆಸಗಿದ್ದ ಬೆಂಗಳೂರಿನ ಇಬ್ಬರು ಅಪ್ರಾಪ್ತ ಕಳ್ಳರು ಹಾಸನ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

          ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿ ನಡೆದಿದ್ದ ಮೂರು ಮೊಬೈಲ್ ಅಂಗಡಿಗಳ ಸರಣಿ ಕಳ್ಳತನ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಕಾರ್ಯಾಚರಣೆ ನಡೆಸಿದ ಹಾಸನ ಪೊಲೀಸರು ಇಬ್ಬರು ಅಪ್ರಾಪ್ತ ಕಳ್ಳರನ್ನು ಬಂಧಿಸಿದ್ದು ಅವರಲ್ಲಿ ಗಣೇಶ್ ಎಂಬಾತ ಶುಕ್ರವಾರ 18 ವರ್ಷಕ್ಕೆ ಕಾಲಿಟ್ಟಿದ್ದಾನೆ.

         ಪಿಯುಸಿ ಓದುತ್ತಿದ್ದ ಈ ಯುವಕರು ಬೆಂಗಳೂರಿನಲ್ಲಿ ಹಲವು ಬಾರಿ ಮೊಬೈಲ್ ಅಂಗಡಿಗಳಲ್ಲಿ ಕಳ್ಳತನ ಮಾಡಿ ವಿಫಲರಾಗಿ ಹಾಸನದ ಶಾಂತಿಗ್ರಾಮದಲ್ಲಿ ಭಾರಿ ಪ್ರಮಾಣದ ಮೊಬೈಲ್‍ಗಳನ್ನ ಕಳವು ಮಾಡಿಅಂಗಡಿಗಳಿಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ, ಡಿವಿಆರ್‍ಗಳನ್ನೂ ಬಿಡದೆ ಪರಾರಿಯಾಗಿದ್ದರು.

         ಕಳ್ಳತನ ಮಾಡಲು ರೋಲಿಂಗ್ ಷೆಟರ್ ತೆಗೆಯಲು ಜಾಕ್ ಬಳಸಿಕೊಂಡಿದ್ದಾರೆ. ಗಣೇಶನ ಚಿಕ್ಕಮ್ಮನ ಮನೆ ಶಾಂತಿಗ್ರಾಮದಲ್ಲಿದೆ. ಒಮ್ಮೆ ಅಲ್ಲಿಗೆ ಬಂದಾಗ ಮೊಬೈಲ್ ಅಂಗಡಿಗಳ ಮೇಲೆ ಕಣ್ಣು ಬಿದ್ದಿದೆ. ಬೆಂಗಳೂರಿನಲ್ಲಿ ಇರುವಷ್ಟು ಭದ್ರತೆ ಈ ಅಂಗಡಿಗಳಿಗೆ ಇಲ್ಲದ್ದನ್ನು ಗಮನಿಸಿದ್ದಾನೆ. ನಂತರ ಅಪ್ರಾಪ್ತ ಯುವಕನೋರ್ವನನ್ನು ಕರೆದುಕೊಂಡು ಬಂದು 2 ಲಕ್ಷ ಮೌಲ್ಯದ 42 ಹೊಸ ಮೊಬೈಲ್ ಸೇರಿ ಇನ್ನಿತರ ಬೆಲೆಬಾಳುವ ವಸ್ತುಗಳನ್ನೂ ದೋಚಿ ಪರಾರಿಯಾಗಿದ್ದರು.

ಹಾಸನ ಪೊಲೀಸರು ಜಾಡು ಹಿಡಿದು ಹೊರಟಾಗ ಬೆಂಗಳೂರಿನಲ್ಲಿ ಪೆÇಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಯುವಕರು ಒಂದೊಂದಾಗಿ 10 ಮೊಬೈಲ್‍ಗಳನ್ನೂ ಒಎಲ್‍ಎಕ್ಸ್‍ನಲ್ಲಿ ಮಾರಾಟ ಮಾಡಿದರು. ಅವುಗಳಲ್ಲಿ ಕೆಲವನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link