ಬೆಂಗಳೂರು
ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ದೇವನಹಳ್ಳಿ ಪೊಲೀಸರು ಆತನ ಜೊತೆಯಲ್ಲಿ ಕೃತ್ಯ ನಡೆಸುತ್ತಿದ್ದ ಗ್ಯಾಂಗ್ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ದ್ರೋಣಾಚಲಂ ಮಂಡಲ ಪಾತ್‍ಪೇಟದ ನಾಗಾರ್ಜುನ (26) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಸುಮಾರು 3 ಲಕ್ಷ ಮೌಲ್ಯದ 24 ಸ್ಮಾರ್ಟ್ ಫೋನ್ ಮತ್ತು ಒಂದು ಬೊಲೇರೋ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಪೊಲೀಸರು ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದವಾಗಿ ಕಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಇವನ ಜೊತೆಯಲ್ಲಿ ಮೊಬೈಲ್ ಕಳ್ಳತನ ಮಾಡುವ ದೊಡ್ಡ ಜಾಲವಿದ್ದು, ಇವರೆಲ್ಲರು ಒಂದೇ ಗ್ರಾಮದವರಾಗಿದ್ದಾರೆ ಎನ್ನಲಾಗಿದೆ. ಕಳ್ಳತನ ಮಾಡಿ ಅದರಿಂದ ಬರುವ ಹಣದಿಂದ ಎಂಜಾಯ್ ಮಾಡುವುದನ್ನೆ ಕಾಯಕವಾಗಿಸಿಕೊಂಡಿದ್ದರು ಅವರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಮಾರಾಟ ಇಬ್ಬರ ಸೆರೆ
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಬನಶಂಕರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆದಿತ್ಯ(21), ಅಭಿಷೇಕ್ ಸಿಂಗ್ (24) ಬಂಧಿತ ಆರೋಪಿಗಳು. ಇವರು ಬನಶಂಕರಿಯ 2ನೇ ಹಂತದ ಮಹೇಶ್ವರಮ್ಮ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಬನಶಂಕರಿ ಪೊಲೀಸ್ ಇನ್ಸ್‍ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡದ ದಾಳಿಮಾಡಿ ಆರೋಪಿಗಳನ್ನು ಬಂಧಿಸಿದೆ.ಆರೋಪಿಗಳನ್ನು ಬಂಧಿಸಿರುವ ಪೊಲೀಸರು 1ಕೆಜಿ ಗಾಂಜಾ ಮೂರು ಸಾವಿರ ನಗದು ವಶ ಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








