ಸಿಸಿಬಿ ಮುಸುಕಿನಲ್ಲಿ ಅಡುಗೆ ಸಹಾಯಕನ ಮೇಲೆ ಹಲ್ಲೆ …!!!!

ಬೆಂಗಳೂರು

         ಸಿಸಿಬಿ ಪೊಲೀಸರ ಸೋಗಿನಲ್ಲಿ ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಬಳಿಯ ಸರ್ಕಾರಿ ವಸತಿ ನಿಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ಆಡುಗೆ ಸಹಾಯಕನನ್ನು ಅಪಹರಿಸಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ನಂತರ ಹಾಸ್ಟೆಲ್‍ಗೆ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.

          ನಂದಿಗಿರಿಧಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಕಳೆದ ಜ,31 ರ ಮುಂಜಾನೆ 5 ಗಂಟೆ ಸುಮಾರಿಗೆ ನುಗ್ಗಿರುವ 12 ಮಂದಿಯ ತಂಡ ಆಡುಗೆ ಸಹಾಯಕ ವೇಣುಗೋಪಾಲ ಸ್ವಾಮಿಗೆ ತಾವು ಸಿಸಿಬಿ ಪೆÇಲೀಸರು, ಕಳ್ಳತನ ಕೃತ್ಯದಲ್ಲಿ ನೀನು ಭಾಗಿಯಾಗಿದ್ದೀಯಾ ಎಂದು ಕರೆದುಕೊಂಡು ಹೋಗಿದ್ದಾರೆ.

         ದೊಡ್ಡಬಳ್ಳಾಪುರ ತಾಲೂಕಿನ ತಪಸೀಪುರ ಅರಣ್ಯಪ್ರದೇಶಕ್ಕೆ ಕರೆದ್ಯೊಯ್ದ ಕಿಡಿಗೇಡಿಗಳು ವೇಣುಗೋಪಾಲಸ್ವಾಮಿ ಮೇಲೆ ಹಲ್ಲೆ ಮಾಡಿ, ನಿನ್ನ ಸ್ನೇಹಿತ ಹರೀಶ್ ಎಲ್ಲಿ ಎಂದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದಾರೆ.ಬಳಿಕ ವೇಣುಗೋಪಾಲಸ್ವಾಮಿ ಯನ್ನ ಮತ್ತೆ ಹಾಸ್ಟೆಲ್ ನಲ್ಲಿ ಬಿಟ್ಟು ಹೋಗಿದ್ದು, ಈ ಬಗ್ಗೆ ಯಾರಿಗಾದ್ರೂ ಹೇಳಿ ಪೆÇಲೀಸ್ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ

         ಮೂಲತಃ ಮಾಗಡಿ ತಾಲೂಕಿನ ವೇಣುಗೋಪಾಲಸ್ವಾಮಿ ಅದೇ ತಾಲೂಕಿನ ಸೀಗೆಕುಪ್ಪೆ ಗ್ರಾಮದ ಹರೀಶ್ ಎಂಬಾತ ಪರಿಚಯವಿದ್ದು ಇಬ್ಬರು ಸ್ನೇಹಿತರಾಗಿದ್ದರು. ಆದರೆ ಹರೀಶ್ ತಾವರೆಕೆರೆ ಮೂಲದ ಯುವತಿಯೊಂದಿಗೆ ಪರಾರಿಯಾಗಿದ್ದು, ವೇಣುಗೋಪಾಲಸ್ವಾಮಿಗೆ ಹರೀಶ್ ಬಗ್ಗೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಆತನನ್ನು ಅಪಹರಿಸಿದ್ದಾರೆ. ಇದಕ್ಕೆ ಸಿಸಿಬಿ ಪೆÇಲೀಸರ ಹೆಸರಿನಲ್ಲಿ ಹಾಸ್ಟೆಲ್‍ಗೆ ನುಗ್ಗಿ ವೇಣುಗೋಪಾಲಸ್ವಾಮಿಯನ್ನ ಅಪಹರಿಸಿದ್ದಾರೆ.ಈ ಕುರಿತು ವೇಣುಗೋಪಾಲಸ್ವಾಮಿ ನಂದಿಗಿರಿಧಾಮ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link