ಪಾವಗಡ;-
ಬಡ ರೈತ ಮಹಿಳೆಯ ಸುಮಾರು 400 ಹುಣಸೆ ಗಿದಗಳನ್ನು ಕಡಿದು ಹಾಕಿರುವ ವ್ಯಕ್ತಿಯ ಮೇಲೆ ಕ್ರಮ ಜರುಗಿಸಬೇಕೆಂದು ರೈತ ಮತ್ತು ಹಸಿರು ಸೇನೆ ಸಂಘ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳು ಸೋಮವಾರ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಗಿಡಗಳನ್ನು ಹಾನಿ ಮಾಡಿದ ಕಿಡಿಗೇಡಿಯನ್ನು ಭಂದಿಸಬೇಕೆಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ ಘಟನೆ ಸೋಮವಾರ ಜರುಗಿದೆ,
ಮುತ್ತಿಗೆಯ ನೇತೃತ್ವ ವಹಿಸಿದ್ದ ಹಸಿರುಸೇನೆ ಸಂಘದ ತಾ. ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ನಿಡಗಲ್ ಹೋಬಳಿ ವ್ಯಾಪ್ತಿಯ ಕೋಟಗುಡ್ಡ ಗ್ರಾಮದಲ್ಲಿರುವ ಬಡ ಮಹಿಳೆ ಈರಮ್ಮ ಎನ್ನುವರಿಗೆ ಸೇರಿದ ಮುಗದಾಳಬೆಟ್ಟ ಗ್ರಾಮದ ಸರ್ವೇನಂಬರ್ 93/1ಎ2 ನಲ್ಲಿ 4 ಎಕರೆ ಜಮೀನಲ್ಲಿ 400 ಹುಣಸೇ ಗಿಡಗಳನ್ನು ಬೆಳೆಸಿದ್ದು,ಸುಮಾರು 5 ವರ್ಷದ ಗಿಡಗಳು ಇನ್ನೇನು ಫಸಲು ಕೊಡುವ ಹಂತಕ್ಕೆ ಬಂದಿದ್ದು, ಈ ಗಿಡಗಳನ್ನು ಕಡಿದು ಹಾಕಿರುವುದು ಖಂಡನೀಯ, ಗ್ರಾಮದಲ್ಲಿರುವ ಎಚ್. ಅಶ್ವಥ್‍ರಾವ್ ಊರುಫ್ ಶಂಕರ್‍ರಾವ್ ಎನ್ನುವ ಹೈದ್ರಾಬಾದ್ ಮೂಲದ ಜಮೀನ್ದಾರ್,
ಕೋಟಗುಡ್ಡ ಗ್ರಾಮವೂ ಸೇರಿದಂತೆ ತಾಲ್ಲೂಕಿನಾದ್ಯಂತ ಕೊಟ್ಯಾತರ ರೂಗಳ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಈರಮ್ಮ ನ ಮಗ ನಾಗರೆಡ್ಡಿ ಇವರ ಬಳಿ ಕೂಲಿ ಕೆಲಸ ಮಾಡುತ್ತಿದ್ದು, ಹಣಕಾಸಿನ ವ್ಯವಹಾರದಲ್ಲಿ ಇತ ಹೇಳಿದ ಮಾತನ್ನು ನಾಗರೆಡ್ಡಿ ಕೇಳಲ್ಲ ಎಂದು ರಾತ್ರೋ ರಾತ್ರಿ ಶಂಕರ್ ರಾವ್ ತನ್ನ ಅನುಚರರನ್ನು ಕಳುಹಿಸಿ ಹುಣಸೇ ಗಿಡಗಳನ್ನು ನಾಶಪಡಿಸಿದ್ದರಿಂದ ಇದನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದ ಈರಮ್ಮ ಮತ್ತು ನಾಗರೆಡ್ಡಿ ಬೀದಿಗೆ ಬಿದ್ದಿದ್ದಾರೆ, ಇದೇ ರೀತಿ ತಾಲ್ಲೂಖಿನಲ್ಲಿ ಇತ ನಡೆಸಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಸಾಕಷ್ಟು ಇದ್ದು, ತಕ್ಷಣ ಈ ವ್ಯಕ್ತಿಯ ಮೇಲೆ ಕ್ರಮ ಜರುಗಿಸಿ ಈರಮ್ಮ ಗೆ ನ್ಯಾಯ ವದಗಿಸಿಕೊಡಬೆಕೇಂದು ಒತ್ತಾಯಿಸಿದರು.
ದಲಿತ ಮುಖಂಡ ಸಿ.ಕೆ. ತಿಪ್ಪೇಸ್ವಾಮಿ ಮಾತನಾಡಿ, ಹೈದ್ರಾಬಾದ್ ನ ಶಂಕರ್ ರಾವ್ ಪಾವಗಡ ತಾಲ್ಲೂಕಿನಲ್ಲಿರುವ ಬಡ ರೈತರಿರಿಗೆ ಬೆದರಿಸಿ ಹಣಕಾಸು ವ್ಯವಹಾರಕ್ಕೆ ಜಮೀನುಗಳನ್ನು ಅಡವಿಟ್ಟುಕೊಳ್ಳುತ್ತಿದ್ದು, ಈ ವ್ಯಕ್ತಿ ಕಾಟ ತಾಳಲಾರದೇ ತಾಲ್ಲೂಕಿನ ರೈತರುಗಳು ರೋಸಿ ಹೋಗಿದ್ದು ಈತನನ್ನು ಪಾವಗಡ ತಾಲ್ಲೂಕಿನಿಂದ ಗಡಿಪಾರು ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಬಂದ ತಾಲ್ಲೂಕಿನ ಅರಸೀಕೆರೆ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.ಭಾಧಿತರಾದ ಈರಮ್ಮ, ನಾಗರೆಡ್ಡಿ, ರೈತ ಸಂಘದ ಕರಿಯಣ್ಣ, ದಲಿತ ಸಂಘದ ಮುಖಂಡರಾದ ಬಳಸಮುದ್ರಪೆದ್ದನ್ನ, ಕಡಮಲಕುಂಟೆಹನುಮಂತರಾಯ, ಕನ್ನಮೇಡಿಕೃಷ್ಣಮೂರ್ತಿ, ಕೋಟಗುಡ್ಡಹನುಮಂತರಾಯ, ಕಡಪಲಕೆರೆನರಸಿಂಹಪ್ಪ,ಉಗ್ರಪ್ಪ,ಗ್ರಾಮಸ್ಥರಾದ ಸೋಮಶೇಖರ್,ಎಚ್. ಕೃಷ್ಣಪ್ಪ,ನಲ್ಲಮಲ್ಲಪ್ಪ,ನರಸಿಂಹಯ್ಯ, ಮಂಜುನಾಥ್, ಲಕ್ಷ್ಮನಾಯ್ಕ, ನಾಗಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
