ತುಮಕೂರು: ಪಿಎಸ್ ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಚಾಲಕ!!

 ತುಮಕೂರು:

Related image

      ಪಾನಮತ್ತನಾಗಿ ಕಾರು ಚಾಲನೆ ಮಾಡಿ, ಕರ್ತವ್ಯ ನಿರತರಾಗಿದ್ದ ಪಿಎಸ್‍ಐ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ಪರಿಣಾಮ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. 

    ನಗರದ ಜಯನಗರ ಠಾಣಾ ಪಿಎಸ್‍ಐ ನವೀನ್ ಗಂಭೀರವಾಗಿ ಗಾಯಗೊಂಡಿರುವವರು.

ಘಟನೆಯ ವಿವರ:

      ಸೋಮವಾರ ರಾತ್ರಿ ವೇಳೆ ಉಪ್ಪಾರಳ್ಳಿ ಅಂಡರ್ ಪಾಸ್ ಬಳಿ ಎರ್ಟಿಗಾ ಕಾರನ್ನು ಕುಡಿದ ಅಮಲಿನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನನ್ನು ಗಮನಿಸಿ, ತಡೆದು ವಿಚಾರಿಸಿ ಫೈನ್ ಕಟ್ಟುವಂತೆ ಪಿಎಸ್ ಐ ನವೀನ್ ಹೇಳಿದ್ದಾರೆ. ಈ ವೇಳೆ ಸ್ಥಳದಿಂದ ಕಾರಿನೊಂದಿಗೆ ತಪ್ಪಿಸಿಕೊಳ್ಳಲು ಚಾಲಕ ಮುಂದಾಗಿದಕ್ಕೆ ಸ್ಟೇರಿಂಗ್ ಹಿಡಿದು ಮುಂದೆ ಹೋಗದಂತೆ ಪಿಎಸ್‍ಐ ತಡೆದಿದ್ದಾರೆ.  ಕುಡಿದ ನಶೆಯಲ್ಲಿದ್ದ ಚಾಲಕ ಪಿಎಸ್‍ಐ ತನ್ನನ್ನು ತಡೆದಿದ್ದಕ್ಕೆ ಕೋಪಗೊಂಡಿದ್ದಾನೆ. ಅಲ್ಲದೇ ಸಿಟ್ಟಿಗೆದ್ದು ಪಿಎಸ್‍ಐ ಮೇಲೆಯೇ ವಾಹನ ಹತ್ತಿಸಲು ಪ್ರಯತ್ನ ಪಟ್ಟಿದ್ದಾನೆ.

     ಈ ಘಟನೆಯಿಂದ ಸಬ್ ಇನ್ಸ್ಪೆಕ್ಟರ್ ನವೀನ್ ರವರಿಗೆ ಮುಖ-ಮೂಗು, ಕೈಮತ್ತು ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಪಿಎಸ್ಐ ರವರು ತಮ್ಮ ಜೀಪಿನ ಚಾಲಕನ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಸಂಬಂಧ ಪಿಎಸ್ ಐ ನವೀನ್  ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪರಾರಿಯಾದ ವಾಹನದ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link