ಮೈಸೂರು:

ನೈಟ್ರೋಜನ್ ಬಲೂನ್ ಸ್ಫೋಟಗೊಂಡು ಬೆಂಕಿ ಆವರಿಸಿಕೊಂಡು ಬೆಂಕಿ ತಗುಲಿದ್ದರೂ ಪವಾಡವೆಂಬಂತೆ ಸುತ್ತೂರು ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಸುತ್ತೂರು ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯನ್ನು ನೈಟ್ರೋಜನ್ ತುಂಬಿದ್ದ ಬಲೂನ್ ಹಾರಿಬಿಡುವ ಮೂಲಕ ಸುತ್ತೂರು ಶ್ರೀಗಳು ಉದ್ಘಾಟನೆ ಮಾಡುತ್ತಿದ್ದರು. ಈ ವೇಳೆ ಬಲೂನ್‍ಗೆ ಬೆಂಕಿ ತಗುಲಿದ ಪರಿಣಾಮ ಬಲೂನ್‍ಗಳ ಸ್ಫೋಟಗೊಂಡು ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕ್ಷಣಮಾತ್ರದಲ್ಲಿ ಬಲೂನ್ ಸ್ಫೋಟವಾಗಿ ಬೆಂಕಿ ಸುತ್ತಲೂ ಆವರಿಸಿಕೊಂಡಿದೆ. ಸುತ್ತೂರು ಶ್ರೀಗಳಿಗೂ ಬೆಂಕಿ ತಗುಲಿದ್ದು, ಹೆಚ್ಚಿನ ಗಾಯಗಳಾಗಿಲ್ಲ.
ಘಟನಾ ಸ್ಥಳದ ಪಕ್ಕದಲ್ಲೇ ಕುಸ್ತಿಪಟುಗಳು, ಸಾರ್ವಜನಿಕರು ಇದ್ದರು. ಅವರಲ್ಲಿ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
