ಶಾಲಾ ಹೊರ ಗುತ್ತಿಗೆ ನೌಕರರ ಧರಣಿ…!!!

ಬೆಂಗಳೂರು

          ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರ ಗುತ್ತಿಗೆ ನೌಕರರು ನಗರದಲ್ಲಿ ಮಂಗಳವಾರ ಧರಣಿ ಆರಂಭಿಸಿದ್ದಾರೆ.ನಗರದ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರು ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ,ನೇತೃತ್ವದಲ್ಲಿ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

         2018 ರ ಆರಂಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯವರು ಏಕಾಏಕಿಯಾಗಿ ತಮ್ಮ ಅಡಿಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು ಮತ್ತು ಕಾವಲುಗಾರರ ಸುಮಾರು 5 ಸಾವಿರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೌಕರರನ್ನು ನೇಮಕ ಮಾಡಿದರು. ಇದರಿಂದ ಅನಗತ್ಯವಾಗಿ ಸರ್ಕಾರದ ಆರ್ಥಿಕ ಹೊರೆ ಹೆಚ್ಚಾಯಿತು.

       ಹಲವು ವರ್ಷಗಳಿಂದ ದುಡಿಯುತ್ತಿದ್ದ ಹೊರಗುತ್ತಿಗೆ ನೌಕರರನ್ನು ಅಮಾನವೀಯವಾಗಿ ಹೊರಹಾಕಿದರು. ಕಡಿಮೆ ವೇತನ ಪಡೆದು ಗುತ್ತಿಗೆದಾರರ ಶೋಷಣೆ ಮತ್ತು ವಾರ್ಡನ್ ಮೊದಲಾದ ಅಧಿಕಾರಿಗಳ ಕಿರುಕುಳವನ್ನು ಸಹಿಸಿಕೊಂಡು ಮಕ್ಕಳ ಸೇವೆ ಮಾಡಿದ್ದ ತಾಯಂದಿರನ್ನು ಕಡೆಗಣಿಸಲಾಗಿದೆ. ಕೆಲಸದಲ್ಲಿ ಅವರ ಅನುಭವವನ್ನು ಪರಿಗಣಿಸಲಿಲ್ಲ. ಉದ್ಯೋಗವನ್ನು ಅವಲಂಬಿಸಿ ಬದುಕುತ್ತಿದ್ದ ನೌಕರರು ಕಣ್ಣೀರು ಹಾಕುವಂತಾಗಿದೆ ಎಂದು ಆಳಲುತೊಡಿಕೊಂಡರು.

       ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ, ನಿವೃತ್ತಿ ವರೆಗೆ ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು. ಯಥಾಸ್ಥಿತಿ ಜಾರಿ ಮಾಡಲು ಆದೇಶ ನೀಡಿದ ನಂತರವೂ ಕೆಲಸಕ್ಕೆ ಸೇರುವ ಹೊತ್ತಿಗೆ ನೌಕರರನ್ನು ಮರಳಿ ಕೆಲಸಕ್ಕೆ ಸೇರಿಕೊಳ್ಳಬೇಕು. ಎಲ್ಲಾ ಹೊರಗುತ್ತಿಗೆ ನೌಕರರಿಗೆ ಹಿಂದಿನ ಸಾಲಿನ ಜುಲೈ ತಿಂಗಳ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link