ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

ಹರಪನಹಳ್ಳಿ

        ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಸಹ ಮಕ್ಕಳಿಗೆ ಅತ್ಯಗತ್ಯ ಎಂದು ಇಲ್ಲಿಯ ಎಚ್ . ಪಿ. ಎಸ್ ಕಾಲೇಜು ಆಡಳಿತ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರಗೌಡ ತಿಳಿಸಿದ್ದಾರೆ.

        ಅವರು ಪಟ್ಟಣದ ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡಬೇಕು ಎಂದು ಸಿರಿಗೇರಿಯ ಲಿಂಗೈಕ್ಯ ಹಿರಿಯ ತರಳ ಬಾಳು ಜಗದ್ಗುರುಗಳು ಹಲವಾರು ಶಾಲಾ ಕಾಲೇಜುಗಳನ್ನು ಸ್ಥಾಪನೆ ಮಾಡಿದರು, ಅದರಲ್ಲಿ ಇಲ್ಲಿಯ ಶಾಲೆಯೂ ಒಂದು ಎಂದ ಅವರು ಕಟ್ಟಡ ಉತ್ತಮವಾಗಿದೆ, ಉತ್ತಮ ಶಿಕ್ಷಕರನ್ನು ನೇಮಿಸಬೇಕು ಎಂದರು.

        ಇಲ್ಲಿಯ ವೃತ್ತ ನಿರೀಕ್ಷಕ ಡಿ.ದುರುಗಪ್ಪ ಮಾತನಾಡಿ ಮಗುವಿನ ಆಸಕ್ತಿ ನೋಡಿ ಶಿಕ್ಷಣ ನೀಡಬೇಕು, ಶಿಕ್ಷಕರ ಜೊತೆಗೆ ಪೋಷಕರು ಮಕ್ಕಳ ಅಭ್ಯಾಸ, ಬೆಳವಣಿಗೆ ಕುರಿತು ಕೈ ಜೋಡಿಸಬೇಕು ಎಂದು ಅವರು ಹೇಳಿದರು. ಮೊಬೈಲ, ವ್ಯಾಟ್ಸಪ್ ನಿಂದ ಮಕ್ಕಳನ್ನು ದೂರ ವಿಡಬೇಕು ಎಂದು ಸಲಹೆ ನೀಡಿದರು.

        ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಜಿ.ನಂಜನಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯೆ ಜೊತೆಗೆ ನೈತಿಕ ಶಿಕ್ಷಣ ಕೊಡಲಾಗುತ್ತಿದೆ, ಮಕ್ಕಳ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಯೋಗ ಶಿಕ್ಷಣ ಸಹ ಶಾಲೆಯಲ್ಲಿ ಕೊಡುತ್ತೇವೆ ಎಂದು ಅವರು ತಿಳಿಸಿದರು.

        ಮುಖ್ಯ ಶಿಕ್ಷಕ ಎಸ್ .ನಂಜಪ್ಪ ಶಾಲಾ ವಾರ್ಷಿಕ ವರದಿ ವಾಚಿಸಿದರು.ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕುಸುಮಾ, ಎಚ್ ಪಿ ಎಸ್ ಕಾಲೇಜು ಪ್ರಾಚಾರ್ಯ ನೀಲಮ್ಮ, ಬಿಇಒ ಕಚೇರಿಯ ಜಯಮಾಲತೇಶ, ವಕೀಲ ಸಿ.ಸಿದ್ದಪ್ಪ, ತಾ.ಪಂ ಸದಸ್ಯ ಪ್ರಕಾಶ ಹುಣ್ಸಿಹಳ್ಳಿ ಮಾತನಾಡಿದರು. ಬಂದೋಳು ಮಂಜುನಾಥ, ಹಿರಿಯ ಶಿಕ್ಷಕಿ ಉಷಾದೇವಿ, ವಾಮಣ್ಣ, ಭರ್ಮಣ್ಣ, ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link