ಅಶೋಕ್ ಬಾದರದಿನ್ನಿ ಅವರ ವ್ಯಕ್ತಿತ್ವ ದೊಡ್ಡದು

ಚಿತ್ರದುರ್ಗ:

       ನಾಟಕ ನಿಜವಾದ ಪ್ರತಿಭೆಗಳನ್ನು ಹೊರತರುವ ಸಾಧನವಾಗಿರುವುದರಿಂದ ರಂಗಕಲಾವಿದರೆ ನಿಜವಾದ ಹೀರೋಗಳು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮಿ ಹೇಳಿದರು.

       ಕರ್ನಾಟಕ ರಂಗಪರಿಷತ್ ಕೇಂದ್ರ ಸಮಿತಿ ಬೆಂಗಳೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಚಿತ್ರದುರ್ಗ,ಬಾದರಿದಿನ್ನಿ ಆಟ್ರ್ಸ್ ಅಕಾಡೆಮಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ರಂಗಭೂಮಿಯ ಅಶೋಕ ಬಾದರದಿನ್ನಿ ನೆನಪಿನ ಉತ್ಸವ ಉದ್ಘಾಟಿಸಿ ಮಾತನಾಡಿದರು.

       ಸಾಂಸ್ಕøತಿಕ ವಾತಾವರಣ, ಸಾಹಿತ್ಯಿಕ ಅಭಿರುಚಿ ಕಡಿಮೆಯಾಗುತ್ತಿದೆ. ಟಿ.ವಿ., ಮೊಬೈಲ್, ವಾಟ್ಸ್‍ಪ್ ಹಾವಳಿಯಲ್ಲಿ ಬಹಳಷ್ಟು ಸಾಹಿತಿಗಳು ಕೃತಿಚೌರ್ಯ ಮಾಡುತ್ತಿದ್ದಾರೆ. ಆದರೆ ರಂಗ ನಟ, ನಿರ್ದೇಶಕ ಅಶೋಕ ಬಾದರದಿನ್ನಿ ಎಂದೂ ವೃತ್ತಿಗೆ ಅಗೌರವ, ಅಪ್ರಮಾಣಿಕತೆಯನ್ನು ತೋರಲಿಲ್ಲ. ವಿಶೇಷ ವ್ಯಕ್ತಿತ್ವ ಅವರದು. ನೇರ ಮಾತುಗಾರಿಕೆ ಪ್ರೌಢಿಮೆ ಅವರಲ್ಲಿತ್ತು ಎಂದು ಗುಣಗಾನ ಮಾಡಿದರು.

      ಬಹಳಷ್ಟು ಸಾಹಿತಿ, ಸಾಮಾಜಿಕ ಚಿಂತಕರ ಮನೆಗಳು ತೂತಾಗಿದೆ. ಏಕೆಂದರೆ ಅವರುಗಳು ಭ್ರಷ್ಟಾಚಾರವನ್ನು ಎಸಗಲಿಲ್ಲ. ಅಶೋಕ ಬಾದರದಿನ್ನಿರವರ ಜೀವನವೂ ತುಂಬಾ ಕಷ್ಟಕರವಾಗಿತ್ತು. ತಂದೆ-ತಾಯಿಗಳನ್ನು ಗೌರವಿಸುವವರು ಕಡಿಮೆಯಾಗಿರುವ ಇಂದಿನ ಕಾಲದಲ್ಲಿ ಅಶೋಕಬಾದರದಿನ್ನಿರವರ ಪುತ್ರ ಪ್ರಕಾಶ್‍ಬಾದರದಿನ್ನಿ ತಮ್ಮ ತಂದೆಯವರ ನೆನಪಿನಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಗುಣಗಾನ ಮಾಡಿದರು.

          ಎಲ್ಲದಕ್ಕೂ ಸರ್ಕಾರ, ಸಂಘ ಸಂಸ್ಥೆಗಳು ಮತೊಬ್ಬರನ್ನು ಅವಲಂಭಿಸಬಾರದು. ಅದರಿಂದ ಸೋಮಾರಿಗಳಾಗುತ್ತೇವೆ. ಮಕ್ಕಳಿಗೆ ಆಸಕ್ತಿ ಕೊಡುವ ಬದಲು ಆದರ್ಶ ಕೊಟ್ಟ ಎಷ್ಟೊ ಅಪ್ಪ ಅಮ್ಮಂದಿರು ದಿಗ್ಗಜರಾಗಿದ್ದಾರೆ. ಎಲ್ಲಾ ರಂಗವೂ ಸ್ವಾರ್ಥದಿಂದ ಕಲ್ಮಶವಾಗಿದೆ. ಅಶೋಕ ಬಾದರದಿನ್ನಿ ಅನೇಕ ಕಲಾವಿದರನ್ನು ಬೆಳೆಸಿದ್ದಾರೆ. ಜಮುರಾ ಕಲಾಲೋಕ ದೊಡ್ಡದಾಗಿ ಬೆಳೆದಿದೆ ಎಂದರೆ ಅದಕ್ಕೆ ಅಶೋಕ ಬಾದರದಿನ್ನಿ ಕಾರಣ ಎಂದು ನೆನಪಿಸಿಕೊಂಡರು.

         ಸಾಹಿತಿ ಬಿ.ಎಲ್.ವೇಣು ಮಾತನಾಡಿ ನವರಸ ಸೇರಿದರೆ ನಾಟಕವಾಗಲು ಸಾಧ್ಯ. ಟಿ.ವಿ.ಧಾರವಾಹಿಗಳು ಬಂದ ಮೇಲೆ ಮಹಿಳೆಯರೆಲ್ಲರೂ ಟಿ.ವಿ.ಮುಂದೆ ಕುಳಿತು ಯಾವುದನ್ನು ನೋಡಬೇಕೋ ಅದನ್ನು ನೋಡುವುದಿಲ್ಲ. ಯಾವುದು ಬೇಡವೋ ಅದನ್ನು ನೋಡುತ್ತಿದ್ದಾರೆ. ಉಚಿತವಾಗಿ ನಾಟಕಗಳನ್ನು ಪ್ರದರ್ಶಿಸಿದರೂ ನೋಡಲು ವೀಕ್ಷಕರು ಬರುತ್ತಿಲ್ಲ. ರಂಗಭೂಮಿಗೆ ಅಂತಹ ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

        ದೊಡ್ಡ ಕಲಾವಿದ ರಂಗ ನಟರಾಗಿದ್ದ ಅಶೋಕಬಾದರದಿನ್ನಿ ದೊಡ್ಡ ದೊಡ್ಡ ನಾಟಕಗಳನ್ನು ಆಡಿಸಿದ್ದಾರೆ. ವರ್ಣರಂಜಿತ ವ್ಯಕ್ತಿತ್ವ ಅವರದು. ಬದುಕಿಗಾಗಿ ನಾಟಕವಾಡುವುದು ತುಂಬಾ ಕಷ್ಟ. ಅನೇಕ ನೋವು ಸಂಕಟಗಳನ್ನು ಉಂಡು ಅಶೋಕಬಾದರದಿನ್ನಿ ರಂಗಕಲೆಯನ್ನು ನಾಡಿನಾದ್ಯಂತ ಪ್ರದರ್ಶಿಸಿದರು ಎಂದು ಅವರ ಮೇರು ವ್ಯಕ್ತಿತ್ವವನ್ನು ಕೊಂಡಾಡಿದರು.
ಅಶೋಕ ಬಾದರದಿನ್ನಿ ರಂಗಭೂಮಿಯಲ್ಲಿ ಹಣ ಗಳಿಸಲಿಲ್ಲ.

       ಹೆಸರು ಗಳಿಸಿದರು. ಕಲಾವಿದನಿಗೆ ಸಿಗುವ ಗೌರವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಸಾಹಿತ್ಯ, ಸಂಗೀತ, ನೃತ್ಯ, ಭಾಷೆ, ಅಭಿನಯ ಎಲ್ಲದಕ್ಕಿಂತ ಬದುಕು ಮುಖ್ಯ. ಸಾಕಷ್ಟು ಕಲಾವಿದರು ಕೊನೆಗಾಲದಲ್ಲಿ ನಿರ್ಗತಿಕರಾಗಿದ್ದುಂಟು. ಅಶೋಕ ಬಾದರದಿನ್ನಿರವರ ಬದುಕು ಸುಖವಾಗಿರಲಿಲ್ಲ ಎಂದು ಸ್ಮರಿಸಿದರು.ರಚನಾ ಮಂಜುನಾಥ್‍ರವರನ್ನು ಸನ್ಮಾನಿಸಲಾಯಿತು.
ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ಕೆ.ಪಿ.ಎಂ.ಗಣೇಶಯ್ಯ, ಪ್ರದೀಪ್, ಸಾಂಬಶಿವಯ್ಯ ದಳವಾಯಿ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link