ಕರ್ನಾಟಕ ಬಜೆಟ್ 2019-20 : ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದಾದರೂ ಏನು??

ಬೆಂಗಳೂರು:
       ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದ 2019-20ನೇ ಸಾಲಿನ 2 ನೇ ಬಜೆಟ್ ಅನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಿದ್ದು, ಕೃಷಿ ಕ್ಷೇತ್ರ ಮತ್ತು ರೈತರಿಗೆ ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ ಎನ್ನಲಾಗುತ್ತಿದೆ.
      ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ  ಘೋಷಣೆ ಮಾಡಿರುವ ಮಾಹಿತಿ ಕೆಳಗಿನಂತಿದೆ.

     ಕೃಷಿ  :

  1. ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ. ಅನುದಾನ.
  2.  ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂ.
  3.  ಶೂನ್ಯ ಬಂಡವಾಳ ಕೃಷಿ ಯೋಜನೆಗೆ 40 ಕೋಟಿ ರೂ. ಅನುದಾನ.
  4.  ಸಾವಯವ ಕೃಷಿ ಯೋಜನೆಗೆ 35 ಕೋಟಿ ರೂ.
  5.  ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹ; ಅರ್ಹ ಉದ್ದಿಮೆದಾರು, ನವೋದ್ಯಮಿಗಳಿಗೆ ಶೇ. 50 ಪ್ರೋತ್ಸಾಹಧನ; 2 ಕೋಟಿ ರೂ. ಅನುದಾನ.
  6. ನಾಟಿ ಕೋಳಿ ಸಾಕಾಣೆಗೆ 2 ಕೋಟಿ ರೂಪಾಯಿ
  7. ಸಿರಿ ಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ನಗದು
  8.  ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋಗೆ ಬೆಂಬಲ ಬೆಲೆ 50 ಕೋಟಿ, ಪ್ರಮುಖ 6 ಸಿರಿಧಾನ್ಯಗಳಿಗೆ ಬೆಂಬಲ ಬೆಲೆ 10 ಕೋಟಿ ರೂಪಾಯಿ ಅನುದಾನ.
  9.  ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು “ರೈತಸಿರಿ” ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ನಗದು ಪ್ರೋತ್ಸಾಹ; 10 ಕೋಟಿ ರೂ. ಅನುದಾನ.
  10.  ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೇರಣೆ-ಹೆಕ್ಟೇರ್‌ಗೆ 7500 ರೂ. ಪ್ರೋತ್ಸಾಹಧನ ನೀಡುವ “ಕರಾವಳಿ ಪ್ಯಾಕೇಜ್‌”ಗೆ 5 ಕೋಟಿ ರೂ. ಅನುದಾನ.
  11. “ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಗೆ 2019-20 ನೇ ಸಾಲನಲ್ಲಿ 368 ಕೋಟಿ ರೂ. ಅನುದಾನ.
  12. ರಾಜ್ಯದ ಅತಿ ಹೆಚ್ಚು ಬರಪೀಡಿತ ಹಾಗೂ ಅಂತರ್ಜಲ ಮಟ್ಟ ಕುಸಿದಿರುವ 100 ತಾಲ್ಲೂಕುಗಳಲ್ಲಿ 2024ರವರೆಗೆ ಬರ ನಿರೋಧಕ ಜಲಾನಯನ ಚಟುವಟಿಕೆ ಕೈಗೊಳ್ಳಲು 100 ಕೋಟಿ ರೂ ಅನುದಾನ.
  13. ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ಉನ್ನತೀಕರಣ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮದ ಅಭಿವೃದ್ಧಿ ಕಾರ್ಯಗಳಿಗೆ ತಲಾ 5 ಕೋಟಿ ರೂ. ನಿಗದಿ.
  14.  ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮಾ ಯೋಜನೆ ಜಾರಿಗೆ ತರುವ ಬಗ್ಗೆ ಪರಿಶೀಲನೆ.
  15.  ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪನೆಗೆ ಕ್ರಮ. 2019-20 ರಲ್ಲಿ 10 ಕೋಟಿ ರೂ. ಅನುದಾನ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link