ಪೊಲೀಸ್ ತಂಡದ ನಾಟಕದ ಕಾಣಿಕೆ ಮೊತ್ತ ವೃದ್ಧಾಶ್ರಮಕ್ಕೆ ಕೊಡುಗೆ

ಚಿತ್ರದುರ್ಗ

         ಜಿಲ್ಲಾ ಪೋಲೀಸ್ ಸಾಂಸ್ಕೃತಿಕ ಕಲಾ ಮಂಡಳಿ ಮತ್ತು ಪೋಲೀಸ್ ಸಿಬ್ಬಂದಿ ವತಿಯಿಂದ ಕಳೆದ ಫೆ.02 ರಂದು ಮೊದಲನೇ ಬಾರಿಗೆ ನಗರದಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಪಾತ್ರಧಾರಿಗಳಿಗೆ ಜನರಿಂದ ಬಂದ ಕಾಣಿಕೆ ಮೊತ್ತವನ್ನು ನಗರದ ವೃದ್ಧಾಶ್ರಮಕ್ಕೆ ಸಾಮಗ್ರಿ ಮತ್ತು ಫ್ಯಾನ್ ಖರೀದಿಸಿ ಕೊಡುಗೆ ನೀಡಲಾಗಿದೆ.

      ಜಿಲ್ಲಾ ಪೋಲೀಸ್ ಸಾಂಸ್ಕತಿಕ ಕಲಾ ಮಂಡಳಿ ಮತ್ತು ಪೋಲೀಸ್ ಸಿಬ್ಬಂದಿ ವತಿಯಿಂದ ನಗರದ ಪೊಲೀಸ್ ಕವಾಯತು ಮಯದಾನದಲ್ಲಿ ಪ್ರದರ್ಶಿಸಿದ “ಅಣ್ಣನ ಒಡಲು ಬಂಗಾರದ ಕಡಲು” ಎಂಬ ಸಾಮಾಜಿಕ ನಾಟಕ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದ್ದು, ನಾಟಕದ ಪಾತ್ರಧಾರಿಗಳಿಗೆ ಜನರಿಂದ ಕಾಣಿಯಾಗಿ ಬಂದ ಮೊತ್ತದಲ್ಲಿ ಊಟದ ಸಾಮಾಗ್ರಿ ಮತ್ತು ಫ್ಯಾನ್‍ಗಳನ್ನು ಖರೀದಿಸಿ ನಗರದ ಚಿನ್ಮೂಲಾದ್ರಿ ಪ್ರೌಢಶಾಲೆ ಸಮೀಪದ ರಾಜಲಕ್ಷ್ಮಿ ವೃದ್ದಾಶ್ರಮಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕೊಡುಗೆಯಾಗಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link