ಚಿತ್ರದುರ್ಗ:
ಮನೆಯ ಮಾಳಿಗೆ ಕುಸಿದು ನಾಲ್ಕು ಮಂದಿ ಮೃತಪಟ್ಟಿರುವ ಧಾರುಣ ಘಟನೆ ಚಿತ್ರದುರ್ಗದ ಚಳ್ಳಕೆರೆಯ ರಾಮಜೋಗಿಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ನಾಗರತ್ನಮ್ಮ(30), ಮಕ್ಕಳಾದ ತೀರ್ಥವರ್ಧನ(4) ಕೋಮಲ(2), ಯಶಸ್ವಿನಿ(5) ಮೃತರು. ಚಂದ್ರಶೇಖರ್ ಹಾಗೂ ದೇವಿಕಾ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಮಾಳಿಗೆ ಸಡಿಲವಾಗಿರುವುದು ಯಾರಿಗೂ ಗಮನಕ್ಕೇ ಬಂದಿರಲಿಲ್ಲ, ಪೂರ್ವಜರ ಮಾಳಿಗೆಯಾದ ಕಾರಣ ಎಲ್ಲರೂ ನಿದ್ರಾವಸ್ಥೆಯಲ್ಲಿದ್ದಾಗ ಬೆಳಗ್ಗಿನ ಜಾವ ಏಕಾಏಕಿ ಮಾಳಿಗೆ ಕುಸಿದಿದೆ. ಪರಿಣಾಮ ನಾಗರತ್ನಮ್ಮ, ಕೋಮಲ, ತೀರ್ಥವರ್ಧನ ಮತ್ತು ಯಶಸ್ವಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಲಗಿದ್ದಲ್ಲಿಯೇ ತಾಯಿ ಮತ್ತು ಮೂವರು ಮಕ್ಕಳು ಮಲಗಿದ್ದಲ್ಲಿಯೇ ಶವವಾಗಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ