ದಾವಣಗೆರೆ:
ಅಸ್ವಾಭಾವಿಕವಾಗಿ ಮೃತಪಟ್ಟಿರುವ ನನ್ನ ತಮ್ಮನ ಸಾವಿನ ಬಗ್ಗೆ ಅನುಮಾನವಿದ್ದು, ಸ್ನೇಹಿತರೇ ಕೊಲೆ ಮಾಡಿರುವ ಅನುಮಾನವಿದೆ ಎಂದು ಮೃತ ಶೇಖ್ ಅಹ್ಮದ್ ಸಹೋದರ ದಾದಾಪೀರ್ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಷಾ ನಗರದಲ್ಲಿ ನಮ್ಮ ಕುಟುಂಬ ವಾಸವಾಗಿದ್ದು, ಕಳೆದ ಫೆ.5ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ನನ್ನ ತಮ್ಮ ಶೇಖ್ ಅಹ್ಮದ್(28) ಕುವೆಂಪು ನಗರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಕೆಲ ಮಾಧ್ಯಮಗಳಲ್ಲಿ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ಸ್ನೇಹಿತರೇ ಕರೆದೊಯ್ದು ಹತ್ಯೆ ಮಾಡಿರುವ ಅನುಮಾನವಿದೆ ಎಂದು ದೂರಿದರು.
ನನ್ನ ತಮ್ಮನ್ನನ್ನು ಅವನ ಸ್ನೇಹಿತರು ಕೊಲೆ ಮಾಡಿರುವ ಬಗ್ಗೆ ಶಂಕೆ ಇದೆ. ಆದ್ದರಿಂದ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಮೃತನ ಸಂಬಂಧಿಕರಾದ ಮಹಮದ್ ರಫೀಕ್, ಮನ್ಸೂರ್, ಶೇರ್ ಅಲಿ, ಅಫ್ರೋಜ್ ಖಾನ್, ಕೆ.ಹೆಚ್.ಮೆಹಬೂಬ್, ಅಮ್ಜದ್ ಅಲಿ, ಸಿಕಂದರ್ ಮತ್ತಿತರರು ಹಾಜರಿದ್ದರು.