ಬೆಂಗಳೂರು:
ಮನೆಯ ಹೊರಗೆ ಬಿಟ್ಟಿದ್ದ ಶೂ ಒಳಗೆ ಸುಮಾರು 5 ಅಡಿಯ ನಾಗರಹಾವೊಂದು ಪತ್ತೆಯಾಗಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.
ನೆಲಮಂಗಲ ಸಮೀಪದ ನಾರಾಯಣಪ್ಪನ ಪಾಳ್ಯದ ಮೂರ್ತಿ ಎಂಬವವರ ಮನೆಯಲ್ಲಿ ನಾಗರ ಹಾವು ಪತ್ತೆಯಾಗಿದ್ದು, ಶೂ ಒಳಗೆ 7 ಇಂಚು ಶೂ ಒಳಗೆ 5 ಅಡಿ ಉದ್ದದ ನಾಗರಹಾವನ್ನು ಕಂಡು ಮನೆಯವರು ಗಾಬರಿಯಾಗಿದ್ದಾರೆ.
ತಕ್ಷಣ ನೆಲಮಂಗಲದ ಉರಗ ರಕ್ಷಕ ಸ್ನೇಕ್ ಲೋಕೇಶ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಲೋಕೇಶ್ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ನಾಗರಹಾವು ರಕ್ಷಣೆಯಿಂದ ಆತಂಕಗೊಂಡಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
