ನನ್ನ ತಮ್ಮನನ್ನು ಬೆಳೆಸಿ ಎಂದ ಡಿ ಬಾಸ್.!

ಬೆಂಗಳೂರು : 

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಸ್ನೇಹ ಜೀವಿ ಅನ್ನೋದು ಎಲ್ಲರಿಗೂ‌ ಗೊತ್ತಿರೋ ವಿಚಾರ, ಯಾರೇ ಬಂದರು ಪ್ರೀತಿಯನ್ನು ಹಂಚೋ ದಾಸ, ಈಗ ದರ್ಶನ್ ಅವರು ತಮ್ಮ ತಮ್ಮನಿಗಾಗಿ ಅಭಿಮಾನಿಗಳ ಬಳಿ ಒಂದು‌ ಮನವಿಯನ್ನು ಇಟ್ಟಿದ್ದಾರೆ ಪ್ರೀತಿಯ ತಮ್ಮನನ್ನು ಹರಸಿ ಪ್ರೋತ್ಸಹಿಸಿ ಅಂತ ಹೇಳಿದ್ದಾರೆ. ಹಾಗಂತ ಇವರು ಬೆಳೆಸಿ ಅಂತ ಕೇಳಿರೋದು ದಿನಕರ್ ತೂಗುದೀಪ ಅವರನಲ್ಲ.

   ರೆಬೆಲ್‌ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಅವರನ್ನು ಹೌದು ಅಂಭಿ ದಚ್ಚು ಅವರ ಸಂಬಂಧ ಅದು ಎಂತಹದು‌ ಅನ್ನೋದು‌ ಎಲ್ಲರಿಗೂ ಗೊತ್ತೆ ಇದೆ. ಇನ್ನು ದರ್ಶನ್ ತಮ್ಮ ಮೊದಲನೇ‌ ಮಗ ಅನ್ನೋ ಹಾಗೇ ಬಿಂಬಿತವಾಗಿದ್ರು ಈಗ ಅಂಭಿ ಕಾಲವಾದ ಮೇಲೆ ಅಂಬಿ ಪುತ್ರ‌ ಅಭಿ ಬೆನ್ನಿಗೆ ದರ್ಶನ್ ನಿಂತಿದ್ದಾರೆ.

   ಹೌದು ನಾಳೆ ಅಭಿಷೇಕ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರದ‌ ಟೀಸರ್ ರಿಲೀಸ್ ಆಗ್ತಾ ಇದೆ. ಈ ಸಲುವಾಗಿ ದರ್ಶನ್ ತಮ್ಮ ಫೇಸ್ ಬುಕ್‌ ಮತ್ತು‌ ಟ್ವಿಟರ್ ಖಾತೆಯಲ್ಲಿ ‘ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಶ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲಿ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ‌’ಅಮರ್’ ಟೀಸರ್ ಬಿಡುಗಡೆಯಾಗಿತ್ತಿದೆ ಎಲ್ಲರೂ ನೋಡಿ ಆಶೀರ್ವದಿಸಿ ಹರಸಿ ಬೆಳಸಿ ಎಂದು ಬರೆದುಕೊಂಡಿದ್ದಾರೆ. 

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link