ಕುಣಿಗಲ್
ಇತ್ತೀಚೆಗೆ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳಿಂದ ನಾಗರೀಕರು ಭಯಬೀತರಾಗಿದ್ದಾರೆ. ಮೊನ್ನೆಯಷ್ಟೇ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ಮೂರು ಮನೆಗಳ ಸರಣಿ ಕಳ್ಳತನ ಪ್ರಕರಣ ಹಸಿಯಾಗಿರುವಾಗಲೇ ಆಲಪ್ಪನಗುಡ್ಡೆಯಲ್ಲಿ ಹಗಲು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ.
ತಾಲ್ಲೂಕಿನ ನಡೆಮಾವಿನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಪ್ಪನ ಗುಡ್ಡೆ ಬಳಿ ಹಾಡಹಗಲೇ ಮನೆ ಬೀಗ ಮುರಿದು ದರೋಡೆ ಮಾಡಿ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿದ್ದಾರೆ .ನಡೆಮಾವಿನಪುರ ಗ್ರಾಮದ ವಾಸಿಯಾದ ನಾರಾಯಣಪ್ಪ ಎಂಬುವರ ಮನೆಯಲ್ಲಿ ಮಧ್ಯಾಹ್ನದ ಸುಮಾರಿನಲ್ಲಿ ಒಡವೆ ಹಾಗೂ ನಗದನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ
ಮನೆಯಲ್ಲಿ ಯಾರೂ ಇಲ್ಲದೆ ಬೀಗ ಹಾಕಿರುವುದನ್ನು ಗಮನಿಸಿ ಮನೆ ದರೋಡೆ ಮಾಡಿದ ಕಳ್ಳ ಉಂಗುರ ಕಾಲು ಚೈನು ಸೇರಿದಂತೆ ನಗದನ್ನು ಕದ್ದು ಪರಾರಿಯಾಗುತ್ತಿದ್ದ , ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮನ್ ಹಾಗಿ ಕೆಲಸ ಮಾಡುತ್ತಿದ್ದ ನಾರಾಯಣಪ್ಪ ಎಂದಿನಂತೆ ತನ್ನ ಮನೆಗೆ ಊಟಕ್ಕೆ ಬಂದ ಸಂದರ್ಭದಲ್ಲಿ ಮನೆಯ ಬೀಗ ಮುರಿದಿರುವುದು ಪತ್ತೆಯಾಗಿದೆ
ಇದರಿಂದ ಅನುಮಾನಗೊಂಡು ಮನೆಯಲ್ಲಿ ಯಾರೋ ಕಳ್ಳ ಇರಬಹುದೆಂದು ಶಂಕಿಸಿ ಸಾರ್ವಜನಿಕರ ಸಹಕಾರದಿಂದ ಆತನನ್ನು ಬಂದಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಮನೆಯ ಮಾಲೀಕ ಹಿಡಿಯುವ ಸಂದರ್ಭದಲ್ಲಿ ಕಳ್ಳ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ ಆದರೂ ಸಾರ್ವಜನಿಕರು ಬಿಡದೆ ಆತನನ್ನು ಬಂದಿಸಿ ಪೊಲೀಸರು ಬರುವ ತನಕ ಕಂಬಕ್ಕೆ ಕಟ್ಟಿ ನಂತರ ವಶಕ್ಕೆ ನೀಡಿದ್ದಾರೆ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ಪುಟ್ಟೇಗೌಡ ಮತ್ತು ಸಿಬ್ಬಂದಿ ಕಳ್ಳನನ್ನು ವಶಕ್ಕೆ ಪಡೆಯುವಾಗ ಆತನ ಬಳಿ ಇದ್ದ ಕಬ್ಬಿಣದ ರಾಡ್ ಗಳು ಸೇರಿದಂತೆ ಹಲವಾರು ವಸ್ತುಗಳು ವಸಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ