‘ನಮ್ಮ ಸೈನಿಕರ ರಕ್ತದ ಪ್ರತಿ ಹನಿಗೂ ಪ್ರತೀಕಾರ ಪಡೆಯುತ್ತೇವೆ’

ದೆಹಲಿ:

     ‘ನಮ್ಮ ನಾಡಿನ ಸೈನಿಕರನ್ನು ಬಲಿ ತೆಗೆದುಕೊಂಡ ರಕ್ತದ ಪ್ರತಿ ಹನಿಗೂ ಪ್ರತೀಕಾರ ಪಡೆಯುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

     ಜಮ್ಮು-ಕಾಶ್ಮೀರದಲ್ಲಿ ನಡೆದ ಪಾಕಿಸ್ತಾನದ ಹೇಯಕೃತ್ಯದ ಕುರಿತಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ವಿರುದ್ಧ ಸಂಚು ಮಾಡುವವರು ಯಾವತ್ತೂ ಸಫಲರಾಗಲ್ಲ. ಈ ಸಮಯದಲ್ಲಿ ತಾಳ್ಮೆ ಅವಶ್ಯಕ. ನನಗೆ ತಿಳಿದಿದೆ ಈ ಘಟನೆಯಿಂದ ದೇಶದ ಜನರು ಆಕ್ರೋಶಗೊಂಡಿದ್ದಾರೆ, ಎಲ್ಲರ ರಕ್ತ ಕುದಿಯತೊಡಗಿದೆ. ಇದರ ಹಿಂದೆ ಯಾರಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದರು. 

       ಭಾರತ ಯೋಧರ ಮೇಲೆ ಉಗ್ರರು ದಾಳಿ ನಡೆಸಿ ದೊಡ್ಡ ತಪ್ಪು ಮಾಡಿದ್ಧಾರೆ. ನಾವು ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ. ಉಗ್ರರನ್ನು ಸೆದೆ ಬಡೆಯಲು ಸರ್ಕಾರದಿಂದ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಎಎಂದು ಪ್ರಧಾನಿ ನರೇಂದ್ರ ಮೋದಿಯವರು ಭದ್ರತಾ ಸಮಿತಿ ಸಭೆಯ ಭಾಷಣದ ವೇಳೆ ತಿಳಿಸಿದ್ಧಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ