ಹುಳಿಯಾರು:
ಜಮೀನೊಂದರಲ್ಲಿ ಮಧ್ಯ ರಾತ್ರಿ 2 ಗಂಟೆ ಸಮಯದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.
ಹುಳಿಯಾರು ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ ನರಸಿಂಹಮೂರ್ತಿ ಎಂಬುವವರ ಜಮೀನಿನಲ್ಲಿ ದಾಳಿ ನಡೆದಿದ್ದು, ಜೂಜಾಟಕ್ಕೆ ಇಟ್ಟಿದ 86,260/- ರೂ. ಹಾಗೂ 52 ಇಸ್ಪೀಟು ಎಲೆಗಳು, 7 ಮೊಬೈಲ್ ಗಳು, 3 ಬೈಕ್ ಗಳು ಮತ್ತು 7 ಜನರನ್ನು ದಸ್ತಗಿರಿ ಮಾಡಲಾಗಿದೆ.
ಜಿಲ್ಲಾ ಎಸ್ಪಿ ರವರ ಆದೇಶದ ಮೇಲೆ, ತಿಪಟೂರು ಡಿಎಸ್ಪಿ ಕಲ್ಯಾಣಕುಮಾರ್ ರವರ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ಇನ್ಸ್ಪೆಕ್ಟರ್ ಸುರೇಶ್, ಚಿಕ್ಕನಾಯಕನಹಳ್ಳಿ ಪಿಎಸ್ಐ ನವೀನ್,ಹುಳಿಯಾರು ಪಿಎಸ್ಐ ವಿಜಯ್ ಕುಮಾರ್ ಮತ್ತು ಸಿಬ್ಬಂದಿ ಗಳಾದ ಮೋಹನ್, ವೆಂಕಟೇಶ್ ರವರುಗಳು ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ