ಪ್ರೇಮಿಗಳದಿನದಂದು ನೇಣಿಗೆ ಶರಣಾದ ಯುವತಿ…!!!

ಬೆಂಳೂರು

      ಪ್ರೀತಿಸಿದ ಪ್ರಿಯಕರ ಕೈಕೊಟ್ಟು ಬೇರೊಬ್ಬಳ ಜೊತೆ ಓಡಿ ಹೋಗಿ ವಿವಾಹವಾಗಿದ್ದರಿಂದ ನೊಂದ ನಗರದ ಮಹಾರಾಣಿ ಕಾಲೇಜಿನ ಪದವಿ ವಿದ್ಯಾರ್ಥಿನಿಯೊಬ್ಬಳು ಪ್ರೇಮಿಗಳ ದಿನವಾದ ಗುರುವಾರ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಮಹಾರಾಣಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ದೀಪಾ  ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾರೆ .ಅಪ್ಪ ಅಮ್ಮ ಇಲ್ಲದಿದ್ದರಿಂದ ಕಳೆದ ಐದಾರು ವರ್ಷಗಳಿಂದಲೂ ದೀಪಾ .ಚಿಕ್ಕಬಳ್ಳಾಪುರದ ಬಾಪೂಜಿನಗರದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದಳು.

       ದೊಡ್ಡಮ್ಮನ ಮನೆಯ ಪಕ್ಕದಲ್ಲೇ ಇದ್ದ ಸುರೇಶ್ ಎಂಬಾತನೊಂದಿಗೆ ದೀಪಾಳಿಗೆ ಪ್ರೇಮಾಂಕುರವಾಗಿತ್ತು.ಹಲವು ವರ್ಷಗಳಿಂದ ಮನೆಯವರಿಗೂ ಗೊತ್ತಿಲ್ಲದೆ ದೀಪಾ ಹಾಗೂ ಸುರೇಶ್ ಪ್ರೀತಿಸುತ್ತಿದ್ದರು.4 ದಿನಗಳ ಹಿಂದೆ ಸುರೇಶ್ ಮತ್ತೊಂದು ಯುವತಿಯನ್ನು ಕರೆದುಕೊಂಡು ಮನೆ ಬಿಟ್ಟು ಓಡಿ ಹೋಗಿದ್ದಾನೆ.

          ಇದರಿಂದ ಆಕ್ರೋಶಗೊಂಡ ದೀಪಾ ಗುರುವಾರ ರಾತ್ರಿ ಸುರೇಶ್‍ಗೆ ಕರೆ ಮಾಡಿ ಸಾಕಷ್ಟು ವಾಗ್ವಾದ ನಡೆಸಿದ್ದಾಳೆ .ಆದರೆ ಸುರೇಶ್ ನಾನು ನಿನ್ನನ್ನ ಪ್ರೀತಿಸಿಲ್ಲ, ಮದುವೆಯೂ ಆಗಲ್ಲ. ನಾನು ಬೇರೆ ಹುಡುಗಿಯನ್ನ ಮದುವೆಯಾಗಿದ್ದೇನೆ ಎಂದಿದ್ದಾನೆ.ಆತನ ಮಾತಿನಿಂದ ನೊಂದ ದೀಪಾ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

         ಬೆಳಗ್ಗೆ 9 ಗಂಟೆ ಕಳೆದರೂ ದೀಪ ಕೊಠಡಿಯ ಬಾಗಿಲು ತೆಗೆಯದಿದ್ದರಿಂದ ಆತಂಕಗೊಂಡ ಮನೆಯವರು ಬಾಗಿಲು ಒಡೆದು ನೋಡಿದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಪರಿಶೀಲನೆ ನಡೆಸಿದಾಗ ದೀಪಾಳ ಕೆಲ ನೋಟ್‍ಬುಕ್‍ಗಳಲ್ಲಿ ಪ್ರೀತಿ ಪ್ರೇಮದ ಸಂದೇಶಗಳಿದ್ದು, ಮತ್ತೊಂದು ಡೈರಿಯಲ್ಲಿ ಡೆತ್‍ನೋಟ್ ಬರೆದಿದ್ದಾಳೆ.ಅವುಗಳನ್ನ ವಶಪಡಿಸಿಕೊಂಡು ಆರೋಪಿ ಸುರೇಶ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link