ಬೆಂಗಳೂರು
ಹೋಟೆಲ್‍ನ ಕೊಠಡಿಯಲ್ಲಿಯೇ ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಕಾಡುಗೋಡಿ ಪೊಲೀಸರು ಅದೇ ಹೊಟೇಲ್‍ನಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪುರ ಮೂಲದ ಯಂಬಾ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ,ಮುಂಬೈ ಮೂಲದ ರಂಜಿತಾ ಕಳೆದ ವಾರ ಕಂಪನಿ ಕೆಲಸದ ಮೇಲೆ ಬಂದು ಕಾಡುಗೋಡಿ ಸಮೀಪದ ಐಟಿಪಿಎಲ್ ರಸ್ತೆಯ ಕ್ರೈಸ್ಟ್ ಹೋಟೆಲ್‍ನಲ್ಲಿ ವಾಸ್ತವ್ಯ ಹೊಡಿದ್ದರು.
ಕೆಲಸ ಮುಗಿಸಿ ಮುಂಬೈಗೆ ಫೆಬ್ರವರಿ 8 ರಂದು ಹೊರಡಲು ಸಿದ್ದತೆ ಮಾಡಿಕೊಂಡಿದ್ದ ಅವರು ಹೋಟೆಲ್ ನ 7ನೇ ಮಹಡಿಯಲ್ಲಿರುವ 701 ನೇ ನಂಬರ್ ರೂಮ್‍ನಲ್ಲಿ ಕೊಲೆಯಾಗಿದ್ದರು.’
ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು ತನಿಖೆ ಕೈಗೊಂಡು ಅದೇ ಹೋಟೆಲ್‍ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮಣಿಪುರ ಮೂಲದ ಯಂಬಾ ಸಿಂಗ್‍ನನ್ನು ಬಂಧಿಸಿದ್ದಾರೆ.ಆರೋಪಿಯು ಮಹಿಳೆ ತಂಗಿದ್ದ ರೂಮಿನಲ್ಲಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.
ಮಹಿಳೆ ಬಳಿ ಇದ್ದ ಒಪ್ಪೊ ಮತ್ತು ಆಪಲ್ ಐ ಫೋನ್‍ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ವಿಚಾರಣೆಯಲ್ಲಿ ಕೇವಲ ಫೋನ್ ಮತ್ತು ಮೂರೂವರೆ ಸಾವಿರ ದುಡ್ಡಿಗಾಗಿ ಮಹಿಳೆಯನ್ನು ಹತ್ಯೆ ಮಾಡಿ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಂಡಿದ್ದು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹ್ಮದ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








