ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ಶಿಕ್ಷಕರ ಒತ್ತಾಯ

ದಾವಣಗೆರೆ:

        ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಬೆಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

       ಇಲ್ಲಿನ ದಾವಣಗೆರೆ-ಹರಿಹರ ರಸ್ತೆಯಿಂದ ರ್ಯಾಲಿ ನಡೆಸಿದ ಸಂಘದ ಮುಖಂಡರು, ಪ್ರಾಥಮಿಕ ಶಾಲಾ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಎನ್.ತಿಪ್ಪೇಶ್ಪಪ್ಪ ಮಾತನಾಡಿ, ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿದೆ. ರಾಜ್ಯದಲ್ಲೆಡೆ 28 ಸಾವಿರದಷ್ಟು ಮುಖ್ಯೋಪಾಧ್ಯಾಯರು, ಬಡ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ 10ರಿಂದ 30 ವರ್ಷಗಳಲ್ಲಿ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆತಿಲ್ಲ. ಶಾಲಾ ಆಡಳಿತದ ಎಲ್ಲಾ ಕೆಲಸದ ನಿರ್ವಹಣೆ ಮಾಡುತ್ತಿದ್ದರೂ ಆರ್ಥಿಕ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ನೂತವಾಗಿ ಜಾರಿಗೆ ತಂದಿರುವ ಪಿಂಚಣಿ ಯೋಜನೆಯು ನೌಕರರಿಗೆ ಮರಣ ಶಾಸನದಂತಿದೆ. ನೂತನ ಪಿಂಚಣಿ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಶಿಕ್ಷಕರ ವರ್ಗಾವಣೆಯನ್ನು ತಕ್ಷಣವೇ ಪ್ರಾರಂಭಿಸಬೇಕು. ಪದವೀಧರರು ಮತ್ತು ಇತರೆ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ಪ್ರಾರಂಭಿಸಬೇಕು. ಮುಖ್ಯೋಪಾಧ್ಯಾಯರು ಹಾಗೂ ಬಡ್ತಿ ಹೊಂದಿದವರಿಗೆ ಆರ್ಥಿಕ ಸೌಲಭ್ಯ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಬಗೆಹರಿಸಬೇಕು, ಶಿಕ್ಷಕರನ್ನು ಬಿಎಲ್‍ಓ ಹಾಗೂ ಇನ್ನಿತರ ಶಿಕ್ಷಕೇತರ ಕಾರ್ಯಗಳಿಂದ ಮುಕ್ತಗೊಳಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

         ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಎಂ.ಸಿದ್ದೇಶಿ, ಹೆಚ್.ಕೆ.ಚಂದ್ರಶೇಖರ್, ಚಂದ್ರಪ್ಪ, ಶಿವಮೂರ್ತಿ, ಗಂಗಾಧರ ನಾಯ್ಕ, ಖೈರುನ್ನಿಸಾ, ಪ್ರಕಾಶ್, ಓಂಕಾರಪ್ಪ, ಕಾಶಿಬಾಬು, ಕೆ.ಕರಿಬಸಯ್ಯ, ಕೆ.ಇ.ವೇದಮೂರ್ತಿ, ದೇವೇಂದ್ರಪ್ಪ, ಸೈಯದ್ ನಜೀರ್ ಅಹ್ಮದ್, ಶಾಮಣ್ಣ, ಅಜ್ಜಪ್ಪ, ಮಹೇಶ್ವರಪ್ಪ, ಗುರುಮೂರ್ತಿ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link