ಲಂಬಾಣಿ ಸಮುದಾಯದ ನಂಬಿಕೆ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದೆ-ರಘುಮೂರ್ತಿ

ಚಳ್ಳಕೆರೆ

        ಕಳೆದ ಸುಮಾರು ಎರಡು ಶತಮಾನಗಳಿಂದ ಬಂಜಾರ ಸಮುದಾಯವೂ ಸೇರಿದಂತೆ ಸಮಸ್ತ ಮಾನವ ಜನಾಂಗಕ್ಕೆ ಕಲೆ ಹಾಗೂ ಸಂಸ್ಕøತಿಯ ಜೊತೆಯಲ್ಲಿ ಧರ್ಮದ ಸಂಸ್ಕಾರವನ್ನು ನೀಡಿದ ಮಹಾನ್ ಶ್ರೇಷ್ಠರಲ್ಲಿ ಸಂತ ಶ್ರೀಸೇವಲಾಲ್ ಸಹ ಒಬ್ಬರು. ರಾಜ್ಯ ಸರ್ಕಾರ ಇವರ ಜಯಂತಿಯನ್ನು ಸಹ ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡುವ ಮೂಲಕ ನಾಡಿನ ಎಲ್ಲಾ ಜನತೆಗೆ ಸಂತ ಸೇವಲಾಲ್‍ರವರ ಸೇವಾ ಕಾರ್ಯಗಳನ್ನು ಧಾರ್ಮಿಕ ಜಾಗೃತಿಯನ್ನು ಅರ್ಥೈಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷರು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

         ಅವರು, ಭಾನುವಾರ ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದ ಬಯಲು ರಂಗಮಂದಿರದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಬಂಜಾರ ಸಮುದಾಯ ಹಮ್ಮಿಕೊಂಡಿದ್ದ ಸಂತ ಸೇವಲಾಲ್‍ರವರ 280ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಮುದಾಯ ಕಳೆದ ನೂರಾರು ವರ್ಷಗಳಿಂದ ನಾಡಿನ ಪರಂಪರಾಗತ ಕಲೆ ಮತ್ತು ಸಂಸ್ಕಾರವನ್ನು ಸದೃಢವಾಗಿ ಕಾಪಾಡುವುದರಲ್ಲಿ ಜಾಗೃತೆ ವಹಿಸಿದೆ.

          ಅಪಾರ ಜನಮನ್ನಣೆ ಗಳಿಸಿದ ಈ ಸಮುದಾಯ ಈ ನೆಲೆದ ಸಂಸ್ಕತಿ ಮತ್ತು ಸಂಸ್ಕಾರವನ್ನು ಕಾಪಾಡುವ ಮೂಲಕ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಈ ಸಮುದಾಯದಲ್ಲಿ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಬೇಕಿದೆ. ಪ್ರತಿಯೊಂದು ಜನಾಂಗವೂ ಸಹ ತಮ್ಮದೇಯಾದ ವೈಶಿಷ್ಟತೆಯನ್ನು ಹೊಂದಿರುವಂತೆ ಈ ಜನಾಂಗ ವೈಷ್ಠಿತೆಯ ಜೊತೆಗೆ ವಿನೂತನ ಬಣ್ಣ, ಬಣ್ಣದ ಅಲಂಕಾರಿಕ ಉಡುಪು ಮೂಲಕ ಜನರ ಗಮನ ಸೆಳೆಯುತ್ತಿದೆ.

          ಪ್ರಾಮಾಣಿಕತೆ ನಂಬಿಕೆ ಮತ್ತು ವಿಶ್ವಾಸಕ್ಕೆ ಈ ಜನಾಂಗ ಎಂದು ಕಟಿಬದ್ದರು. ಈ ಜನಾಂಗದ ಅಭ್ಯುದಯಕ್ಕೆ ಅವಶ್ಯವಿರುವ ಸವಲತ್ತುಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಎರಡನೇ ಅವಧಿಗೆ ಪುನರಾಯ್ಕೆಯಾಗಲು ಈ ಜನಾಂಗದ ಸಹಕಾರವೆ ಮೂಲ ಕಾರಣವೆಂದರು.

          ತೀಜ್‍ಗೆ ನೀರು ಎರೆಯುವ ಮೂಲಕ ಸಂತ ಸೇವಲಾಲ್‍ರವರ ಭಾವಚಿತ್ರ ಪುಪ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಪ್ರಾರಂಭದಲ್ಲೇ ಲಂಬಾಣಿ ಭಾಷೆಯಲ್ಲಿ ಶುಭಾಷಯಗಳನ್ನು ತಿಳಿಸಿ ಸಂತ ಶ್ರೀಸೇವಲಾಲ್ ಕಳೆದ ಎರಡು ಶತಮಾನಗಳ ಹಿಂದೆಯೇ ಲಂಬಾಣಿ ಸಮುದಾಯವೂ ಸೇರಿದಂತೆ ಎಲ್ಲಾ ಸಮುದಾಯದ ಧಾರ್ಮಿಕ ಜಾಗೃತಿ ಜ್ಯೋತಿಯಾಗಿ ಕಂಗೊಳಿಸಿದರು.

          ಅವರಲ್ಲಿದ್ದ ಧಾರ್ಮಿಕ ಶ್ರದ್ದೆ ಮತ್ತು ಭಕ್ತಿ ಅನುಕರಣಿಯ. ಲಂಬಾಣಿ ಸಮುದಾಯ ಈ ಮಹಾನ್ ಸಂತನ ಜನ್ಮ ದಿನಾಚರಣೆಯಂದು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಭಕ್ತಿ ಮತ್ತು ಗೌರವದಿಂದ ಸೇವಲಾಲ್ ಜಯಂತಿ ಆಚರಿಸಬೇಕು. ಡಿಜೆ ಸಂಸ್ಕತಿಯನ್ನು ನಿಯಂತ್ರಿಸಬೇಕು ಎಂದರು.

          ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಸ್ಕತಿ ಚಿಂತಕ ಡಾ.ಸಣ್ಣರಾಮಾನಾಯ್ಕ ಮಾತನಾಡಿ, 1739ರಲ್ಲಿ ಸಂತ ಸೇವಲಾಲ್‍ರವರ ಜನ್ಮವಾಯಿತು. ಪ್ರಾರಂಭದಲ್ಲಿಯೇ ಸೇವಲಾಲ್‍ಜೀಯವರು ಧಾರ್ಮಿಕ ಮತ್ತು ಸಾಹಿತ್ಯ ಸೇವೆಯನ್ನು ಮೈಗೂಡಿಸಿಕೊಂಡು ಬೆಳೆದವರು. ವಿಶೇಷವಾಗಿ ಈ ಜನಾಂಗದ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾ ವಿಷಯಗಳನ್ನು ಗ್ರಹಿಸಿ ಸೂಕ್ತ ಮಾರ್ಗದರ್ಶನ ನೀಡಿದವರು.

          ತಾಂಡದ ಜನತೆಗೆ ಇಂದಿಗೂ ನಗರದ ವಾತಾವರಣವನ್ನು ಬಯಸದೆ ತಾಂಡದಲ್ಲೇ ನಮ್ಮ ಮೂಲ ಸಂಸ್ಕøತಿ ಮತ್ತು ಸಂಸ್ಕಾರವನ್ನು ಅಳವಡಿಸಿಕೊಳ್ಳುವಂತೆ ಜನಾಂಗದಲ್ಲಿ ಜಾಗೃತಿ ಮೂಡಿಸಿದವರು. ಯುವ ಜನಾಂಗ ಸಂತ ಸೇವಲಾಲ್‍ರವರ ಆದರ್ಶಗಳನ್ನು ಪಾಲಿಸಿದಲ್ಲಿ ಮಾತ್ರ ಈ ಜನಾಂಗ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.

           ಮಾಜಿ ಸಚಿವ ಎಂ.ಶಿವಮೂರ್ತಿನಾಯ್ಕ ಮಾತನಾಡಿ, ಬೇರೆ ಜನಾಂಗದ ಹೆಣ್ಣು ಮಕ್ಕಳು ಇಂಜನಿಯರಿಂಗ್, ಡಾಕ್ಟರ್ ಪದವಿ ಪಡೆಯುವಂತೆ ನಮ್ಮ ಜನಾಂಗದ ಮಹಿಳೆಯರೂ ಸಹ ಮೊದಲ ಆದ್ಯತೆಯನ್ನು ಶಿಕ್ಷಣ ಪಡೆಯುವುದಕ್ಕೆ ನೀಡಬೇಕಿದೆ. ಹಾಡು, ಕಲೆ, ನೃತ್ಯಗಳು ನಮ್ಮ ಜನಾಂಗದಲ್ಲಿ ಸದಾ ಮೈಗೂಡಿಸಿಕೊಂಡು ಬಂದಿವೆ. ಪ್ರತಿಯೊಂದು ಹಟ್ಟಿಯಲ್ಲೂ ಕಲೆ ಇದೆ. ಕಲೆಯ ಮೌಲ್ಯವನ್ನು ಕಾಪಾಡುವುದರಲ್ಲಿ ನಮ್ಮ ಜನಾಂಗ ಸದಾ ಮುಂದು ಎಂದರು.

           ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕುರುಡಿಹಳ್ಳಿ ಮಠದ ಶ್ರೀಶಿವಸಾಧು ಸ್ವಾಮೀಜಿ ವಹಿಸಿದ್ದರು. ಕನಕಪುರ ಕಲ್ಲಹಳ್ಳಿ ಮುದ್ದು ಲಿಂಗೇಶ್ವರ ಮಠದ ದೇನಾಭಗತ್ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಪೀಠದ ಸರ್ಧಾರ್ ಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ನಾಗೇಂದ್ರನಾಯ್ಕ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಜಯವೀರಚಾರಿ, ಮಕ್ಕಳ ತಜ್ಞ ಡಾ.ಬಿ.ಚಂದ್ರನಾಯ್ಕ, ತಾಲ್ಲೂಕು ಬಂಜಾರ ನೌಕರರ ಸಂಘದ ಅಧ್ಯಕ್ಷ ಗೋಪಾಲನಾಯ್ಕ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಯಿ, ಬಂಜಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ರಾಂಜಿನಾಯ್ಕ, ಪಿ.ಕೃಷ್ಣಾನಾಯ್ಕ, ಯಶ್ವಂತನಾಯ್ಕ, ಎಸ್.ಗೋವಿಂದನಾಯ್ಕ, ಸುರೇಶ್‍ನಾಯ್ಕ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಕವಿತಾಬೋರಯ್ಯ, ಹೋಯ್ಸಳ ಗೋವಿಂದ, ಎಂ.ಜೆ..ರಾಘವೇಂದ್ರ, ಟಿ.ಚಳ್ಳಕೆರೆಯಪ್ಪ, ಕೆ.ವೀರಭದ್ರಯ್ಯ, ಪಾಲಮ್ಮ ಮುಂತಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಶಿಕ್ಷಕ ಸಿ.ರಮೇಶ್‍ನಾಯ್ಕ ಸ್ವಾಗತಿಸಿದರು. ರಾಜಣ್ಣ ನಿರೂಪಿಸಿ, ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap