ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇ ಬೇಕು;ತಿಪ್ಪಾರೆಡ್ಡಿ

ಚಿತ್ರದುರ್ಗ:

       ರಾಕ್ಷಸಿ ಕೃತ್ಯವೆಸಗಿ ಭಾರತದ ವೀರಸೇನಾನಿ ದಿಟ್ಟ ಯೋಧರನ್ನು ಹತ್ಯೆಗೈದಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕಲಿಸುವಂತೆ ಬಿಜೆಪಿ.ಯಿಂದ ಗಾಂಧಿವೃತ್ತದಲ್ಲಿ ಭಾನುವಾರ ಧರಣಿ ನಡೆಸಲಾಯಿತು.

        ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ವೀರಯೋಧರ ವಾಹನವನ್ನು ಸಿಡಿಸಿ ನಮ್ಮ ದೇಶದ ನಲವತ್ತು ಯೋಧರನ್ನು ಬಲಿಪಡೆದಿರುವ ಉಗ್ರರ ಅಟ್ಟಹಾಸವನ್ನು ಖಂಡಿಸಿ ಮಂಡ್ಯದ ಯೋಧ ಗುರುಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವೀರಯೋಧರ ಹತ್ಯೆಯಾಗಿರುವುದನ್ನು ನೋಡಿದರೆ ಭಾರತದ ಪ್ರತಿಯೊಬ್ಬ ಪ್ರಜೆಗೂ ರಕ್ತ ಕುದಿಯುತ್ತದೆ.ಕಡು ಬಡವರು, ಮಧ್ಯಮ ವರ್ಗದವರೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊರವುದಕ್ಕಾಗಿ ಯೋಧನಾಗಿ ಸೇನೆಗೆ ಸೇರುವುದು ಸಹಜ.

          ಹಗಲು ರಾತ್ರಿಯೆನ್ನದೆ ಚಳಿಯಲ್ಲಿ ಭೂತಾನ್, ಸಿಕ್ಕಿಂ, ಜಮ್ಮು ಕಾಶ್ಮೀರ, ಚೀನಾಗ ಗಡಿಯಲ್ಲಿ ದೇಶದ ಗಡಿ ಕಾಯುವ ವೀರಯೋಧರನ್ನು ಬಲಿಪಡೆದಿರುವ ಪಾಕಿಸ್ತಾನದ ಉಗ್ರರಿಗೆ ತಕ್ಕ ಪಾಠಕಲಿಸುವುದಾಗಿ ಈಗಾಗಲೇ ದೇಶದ ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಯಾವುದೇ ಜಾತಿ ಬೇದವಿಲ್ಲದೆ. ಪಕ್ಷ ಬೇದವಿಲ್ಲದೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

           ಜಗತ್ತಿನ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನಕ್ಕೆ ದಿಗ್ಬಂಧನ ವಿಧಿಸಿ ಸಾಮಾಜಿಕ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಹತ್ಯೆಯಾದ ವೀರಯೋಧರ ಗುರುತುಗಳು ಸಿಗುತ್ತಿಲ್ಲವೆನ್ನುವುದಾದರೆ ಪಾಕಿಸ್ತಾನದ ಕುತಂತ್ರಕ್ಕೆ ಭಾರತ ತಕ್ಕ ಉತ್ತರ ಕೊಡಲೇಬೇಕು. ಆ ಕೆಲಸ ಪ್ರಧಾನಿಗೆ ಬಿಟ್ಟದ್ದು, ನಮ್ಮ ದೇಶದ ಕೆಲವು ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿಯೊಂದಿಗೆ ಮಾತನಾಡಿರುವುದು ಅತ್ಯಂತ ಹೇಯತನದ ಕೆಲಸ. ರಾಹುಲ್‍ಗಾಂಧಿ, ಭಾರತದ ಓರ್ವ ಕ್ರಿಕೆಟ್‍ಪಟು ಇವರುಗಳಿಗೆ ದೇಶಾಭಿಮಾನವಿಲ್ಲ.

           ಇಂತಹವರು ನಮ್ಮ ದೇಶದಲ್ಲಿ ಹುಟ್ಟಿರುವುದು ನಾಚಿಕೆಗೇಡು. ಮೃತ ಯೋಧರ ಕುಟುಂಬಗಳಿಗೆ ಈಗಾಗಲೇ 25 ಲಕ್ಷ ರೂ.ಗಳನ್ನು ನೀಡಲಾಗಿದೆ. ಅದಕ್ಕೆ ಬದಲಾಗಿ ಒಂದೊಂದು ಕೋಟಿ ರೂ.ಗಳನ್ನು ನೀಡಬೇಕು. ವಾರಸುದಾರರಿಗೆ ಸರ್ಕಾರಿ ನೌಕರಿ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

            ಬಿಜೆಪಿ.ಗೆ ದೇಶ ಮುಖ್ಯವೇ ಹೊರತು ಪಕ್ಷ ಮುಖ್ಯವಲ್ಲ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಪ್ರಧಾನಿ ಮೋದಿರವರಿಗೆ ಬೆಂಬಲ ಸಿಗುತ್ತಿದೆ. ಹತ್ಯೆಗೀಡಾಗಿರುವ ಯೋಧರ ಆತ್ಮಗಳಿಗೆ ಶಾಂತಿ ಸಿಗಬೇಕಾದರೆ ಉಗ್ರರ ಹುಟ್ಟಡಗಿಸುವ ಕೆಲಸವಾಗಲೇಬೇಕು. ಇದಕ್ಕೆ ಎಲ್ಲಾ ಸಹಕಾರ ಮುಖ್ಯ ಎಂದು ಕೋರಿದರು.

            ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷರುಗಳಾದ ಟಿ.ಜಿ.ನರೇಂದ್ರನಾಥ್, ಜಿ.ಎಂ.ಸುರೇಶ್, ಪ್ರಧಾನ ಕಾರ್ಯದರ್ಶಿ ಮುರಳಿ, ರತ್ನಮ್ಮ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ವಕ್ತಾರ ನಾಗರಾಜ್‍ಬೇದ್ರೆ, ನಗರಸಭೆ ಸದಸ್ಯರುಗಳಾದ ಶಶಿ, ಸುರೇಶ್, ಅಂಗಡಿ ಮಂಜಣ್ಣ, ನರೇಂದ್ರ, ಶಿವಣ್ಣಾಚಾರ್, ರೇಖ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link