ಬಳ್ಳಾರಿ:
ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಕಲ್ಲಿನ ಕಂಬವೊಂದನ್ನು ಕೆಡವಿ ಹಾನಿ ಮಾಡಿದ ಕಿಡಿಗೇಡಿಗಳಿಂದಲೇ ದಂಡ ವಸೂಲಿ ಮಾಡಿ ಹಂಪಿ ಮರು ನಿರ್ಮಾಣ ಕಾರ್ಯ ನಡೆಸಲು ಹೊಸಪೇಟೆಯ ಜೆಎಂಎಫ್ ಕೋರ್ಟ್ ಆದೇಶಿಸಿದೆ.
ಬಂಧಿತ ಆರೋಪಿಗಳನ್ನು ಸ್ಮಾರಕ ಧ್ವಂಸಗೊಳಿಸಿದ ಸ್ಥಳಕ್ಕೆ ಕರೆದೊಯ್ದು ಪ್ರತಿ ಆರೋಪಿಯಿಂದ ತಲಾ 70 ಸಾವಿರ ರು ಹಣ ದಂಡವಾಗಿ ವಸೂಲಿ ಮಾಡಿ, ಬಿದ್ದ ಕಂಬಗಳನ್ನ ಯುವಕರನ್ನು ಕರೆದುಕೊಂಡು ಹೋಗಿ ಅದೇ ಕಂಬಗಳನ್ನು ಯಥಾ ಸ್ಥಿತಿಯಲ್ಲಿರಿಸುವಂತೆ ಜಡ್ಜ್ ಪೂರ್ಣಿಮಾ ಯಾಧವ್ ಆದೇಶಿಸಿದ್ದಾರೆ.
ಮಧ್ಯಪ್ರದೇಶದ ಆಯುಷ್, ರಾಜಾ ಬಾಬು ಚೌಧರಿ, ಬಿಹಾರದ ರಾಜ್ ಆರ್ಯನ್ ಮತ್ತು ರಾಜೇಶ್ ಕುಮಾರ್ ಎಂಬ ಯುವಕರು ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಕಂಬವನ್ನು ಕೆಡವಿದ್ದರು. ಕಂಬವನ್ನು ಕೆಡವುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಫೆಬ್ರುವರಿ 7ರಂದು ಇವರನ್ನು ಬಂಧಿಸಲಾಗಿತ್ತು.
ಮತ್ತೊಮ್ಮೆ ಈ ರೀತಿ ಕಿಡಿಗೇಡಿ ಕೃತ್ಯ ಪುನರಾರ್ತನೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಲು ಕಿಡಿಗೇಡಿಗಳಿಗೆ ಜಡ್ಜ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ