ದಾವಣಗೆರೆ:
ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸಿ.ಆರ್.ಪಿ.ಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್‍ಗೆ 350 ಕೆ.ಜಿ. ಸ್ಫೋಟಕ ಬಳಸಿ ದಾಳಿ ನಡೆಸಿ, ಯೋಧರನ್ನು ಬಲಿ ಪಡೆದ ಭಯೋತ್ಪಾದಕ ಸಂಘಟನೆಯ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಸಿರಿಗನ್ನಡಂ ವಿಕಲಚೇತನರ ಸೇವಾ ಚಾರಿಟಬಲ್ ಟ್ರಸ್ಟ್(ರಿ) ಮತ್ತು ಜಿಲ್ಲಾ ವಿಕಲಚೇತರನ ಪರ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಿಟ್ಟುವಳ್ಳಿಯ ಉತ್ಸವಾಂಬ ನಿಲಯದ ಕಛೇರಿಯಿಂದ ಮೌನ ಮೆರವಣಿಗೆಯ ಮೂಲಕ ಜಯದೇವ ವೃತ್ತ ಮುಖೇನ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಯ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಜೆ.ಇ.ಎಂ. ಎಂಬ ಭಯೋತ್ಪಾದಕ ಸಂಘಟನೆಯು 350 ಕೆಜಿ ಸ್ಪೋಟಕವನ್ನು ಬಳಸಿ ಸೇನಾ ವಾಹನವನ್ನು ಛಿದ್ರ ಮಾಡುವ ಮೂಲಕ 44 ಯೋಧರನ್ನು ಬಲಿ ಪಡೆದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಪಾಕ್ ಪ್ರಾಯೋಜಿತ ಭಯೋತ್ಪಾದನಾ ಸಂಘಟನೆಗಳು ಭಾರತೀಯ ಸೈನಿಕರ ಪದೇ, ಪದೇ ದಾಳಿ ನಡೆಸಿ ಭಾರತೀಯರನ್ನು ಕೆಣಕುವುದರ ಜೊತೆಗೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಇದೊಂದು ಅಮಾನವೀಯ ಕೃತ್ಯವಾಗಿದ್ದು, ಈ ಘಟನೆಗೆ ಕಾರಣವಾಗಿರುವ ಭಯೋತ್ಪಾದನಾ ಸಂಘಟನೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ಪತ್ತೆ ಮಾಡಿ, ಇತರೆ ಉಗ್ರರಿಗೆ ಎಚ್ಚರಿಕೆಯ ಗಂಟೆಯಾಗುವಂತೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಭಯೋತ್ಪಾದನೆಯನ್ನು ಸಂಪೂರ್ಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ.ವೆಂಕಟೇಶ ಕಣ್ಣಾಳರ್, ಹೆಚ್.ಎಂ. ಬಸವರಾಜ್, ಟಿ. ಕೃಷ್ಣಪ್ಪ, ತನ್ವೀರ್‍ಬಾಷಾ, ಹೆಚ್.ಜಿ. ಹಾಲೇಶಪ್ಪ, ಮಲ್ಲಿಕಾರ್ಜುನ, ನಾಗಭೂಷಣ್, ನೀಲಿಬಾಯಿ ಸಿ., ವಿಜಯಲಕ್ಷ್ಮಿ, ಕೆ.ಹೆಚ್. ರೇಖಾ, ಶಫಿವುಲ್ಲಾ, ಶಿವಳ್ಳಿ ಎಸ್. ಮಲ್ಲಿಕಾರ್ಜುನ್, ಗಾಂಧಿನಗರ, ದೇವೇಂದ್ರಪ್ಪ, ಎಂ. ರುದ್ರಪ್ರಸನ್ನ, ಸಾಧಿಕ್, ಬಿ.ಎಂ. ಶಿವರಾಜ್, ಎನ್.ಕೆ. ಹನುಮಂತಪ್ಪ, ಹೆಚ್. ರಮೇಶ್, ಮಹಬೂಬ್ ಅಲಿ, ಪಿ. ಉಮೇಶ್ ಜೋಗಿ, ವಿ. ಆನಂದ್, ಡಿ.ಪಿ. ಲಿಂಗೇಶ್, ವಿಶ್ವನಾಥ್ ಜವಳಿ ಮತ್ತಿತರರು ಭಾಗವಹಿಸಿದ್ದರು.