ಚಂದನವನದ ಹೀರೊ ಹತ್ಯೆಗೆ ಸುಪಾರಿ ಪಡೆದಿದ್ದ ಸ್ಲಂ ಭರತ..!!!!

ಬೆಂಗಳೂರು:

     ಚಂದನವನದಲ್ಲಿ ವೃತ್ತಿಪರವಾಗಿ ಪೈಪೋಟಿ ಇದ್ದರು ವೈಯಕ್ತಿಕವಾಗಿ ಯಾವುದೇ ರೀತಿಯ ವೈಮಸ್ಯಗಳಿಲ್ಲ ಎಂಬುದು ಮೇಲ್ನೋಟಕ್ಕೆ ಮಾತ್ರ ಸತ್ಯ ಎಂಬುದು ಮತ್ತೊಮ್ಮೆ ಪ್ರೂವ್ ಆಗುವಂತೆ ಕಾಣುತ್ತಿದೆ .

   ಇತ್ತ ರೌಡಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ  ಅಲೋಕ್ ಕುಮಾರ್ ಅವರು ಯಾವುದೋ ಹಳೆಯ ಕೇಸ್ ವಿಚಾರಣೆ ಮಾಡುವ ವೇಳೆ ಕುಖ್ಯಾತ ರೌಡಿ ಸ್ಲಂ ಭರತ ಆಘಾತಕಾರಿ ಸುದ್ದಿಯೊಂದನ್ನು ಬಾಯಿ ಬಿಟ್ಟಿದ್ದಾನೆ ತನಗೆ ಚಂದನವನದ ಒಬ್ಬ  ಖ್ಯಾತ ನಟನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಸುಪಾರಿ ಕೃತ್ಯವು ಬಹಳ ಹಿಂದಿನದ್ದದಾಗಿದೆ. 

       ಆ ನಾಯಕ ನಟ ಜೀವ ಬೆದರಿಕೆ ಕರೆ ಬಂದ ಕೂಡಲೆ ಲಿಖಿತ ದೂರು ಕೊಟ್ಟಿದ್ದರು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಸಿಗದ ಕಾರಣ ಪ್ರಕರಣವು ತನಿಖೆ ನಡೆಯದೆ ತಣ್ಣಗಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿ ಫೆ.18 ರಂದು ಸುದ್ದಿಗಾರರೊಂದಿಗೆ ಮಾತನಾಡಿದ  ಅಲೋಕ್ ಕುಮಾರ್ ಅವರು, ನಟನ ಹತ್ಯೆಗೆ ರೌಡಿಶೀಟರ್ ಭರತ ಸುಪಾರಿ ಪಡೆದಿರುವ ಕುರಿತು ವಿಚಾರಣೆ ನಡೆಸಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದರು. 

       ಹಲವು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭರತ ಸಕ್ರಿಯನಾಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನಟನ ಹತ್ಯೆಗೆ ಯಾರು ಸುಪಾರಿ ಕೊಟ್ಟಿದ್ದರು ಅಥವಾ ಭರತನೇ ಮತ್ತೊಬ್ಬರಿಗೆ ಸುಪಾರಿ ನೀಡಿದ್ದನೇ ಎಂಬುದು ಖಚಿತವಾಗಿಲ್ಲ.

      ಇದೊಂದು ಸೂಕ್ಷ್ಮ ವಿಚಾರವಾಗಿರುವ ಕಾರಣ ನಟನ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಹೆಚ್ಚುವರಿ ಆಯುಕ್ತರು ಸ್ಪಷ್ಟಪಡಿಸಿದರು. ಜ.24 ರಂದು ಗುಂಡಿನ ದಾಳಿ ನಡೆಸಿ ಕೆಂಗೇರಿ ಸಮೀಪ ಸ್ಲಂ ಭರತ್‌ನನ್ನು ಸಿಸಿಬಿ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಆತ ಸುಪಾರಿ ಸಂಗತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link