ಆರು ತಿಂಗಳಲ್ಲಿ ಕ್ಷೇತ್ರಕ್ಕೆ 300 ಕೋಟಿ ಅನುದಾನ

ಹೊಳಲ್ಕೆರೆ

       ಜನಸ್ಪಂದನಾಕಾರ್ಯಕ್ರಮದಿಂದಜನರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ಕೊಂಡೊಯ್ಯಲು ಹಾಗೂ ಜನರ ವಾಸ್ತವ ಸಮಸ್ಯೆಗಳನ್ನು ಅರಿಯಲು ಸಹಕಾರಿಯಾಗಲಿದೆ ಎಂದು ಹೊಳಲ್ಕೆರೆ ಶಾಸಕರಾದ ಎಂ ಚಂದ್ರಪ್ಪ ಹೇಳಿದರು.ಹೊಳಲ್ಕೆರೆ ತಾಲ್ಲೂಕಿನ ಕಾಳಘಟ್ಟ ಲಂಬಾಣಿಹಟ್ಟಿಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜನಸ್ಪಂದನಾ ಹಾಗೂ ಗ್ರಾಮ ವಾಸ್ತವ್ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಅಭಿವೃದ್ದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಇವರು ಈ ಜಿಲ್ಲೆಯಎರಡು ಕಣ್ಣುಗಳಿದ್ದಂತೆ, ಜನರಿಗೆಅಗತ್ಯವಾಗಿಬೇಕಾದಮೂಲಭೂತ ಸೌಕರ್ಯಗಳು ಹಾಗೂ ಹಲವು ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತಾಅಭಿವೃದ್ಧಿಯತ್ತಕೊಂಡೊಯ್ಯಲುಇವರಿಂದ ಸಾಧ್ಯವಾಗಲಿದೆಎಂದರು.

          ಜನಸ್ಪಂದನಾಕಾರ್ಯಕ್ರಮದಿಂದಜನರು ನೇರವಾಗಿಜನರ ಕಷ್ಟಗಳನ್ನು ಕಣ್ಣಾರೆಕಂಡುಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತಾ ಕಾರ್ಯವನ್ನು ಈ ದಿನ ನಡೆಯುತ್ತಿದೆ. ಈ ಗ್ರಾಮಕ್ಕೆ ಬೇಕಾಗಿರುವಂತ ಸೌಲಭ್ಯಗಳನ್ನು ಸ್ಥಳೀಯವಾಗಿಯೆ ಅನುಕೂಲಗಳನ್ನು ಪಡೆದುಕೊಳ್ಳಬೇಕು.ಅಗತ್ಯವಾಗಿರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಎದ್ದುಕಾಣುತ್ತಿದ್ದು, ಈ ಗ್ರಾಮಕ್ಕೆಕುಡಿಯುವ ನೀರಿನ ಸಾಕಷ್ಟು ಸಮಸ್ಯೆಇತ್ತು, ಆದರೆ ಹೊಸದಾಗಿಕೊರೆಯಿಸಲಾದ ಕೊಳವೆಬಾವಿಯಲ್ಲಿ ಉತ್ತಮ ನೀರು ಸಿಕ್ಕಿದ್ದರಿಂದ ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆಯಾಗಿದೆ.

          ಆದರೆ ಸುತ್ತಮುತ್ತಲಿನ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಇದ್ದುಇದಕ್ಕೆ ಶಾಂತಿಸಾಗರದಿಂದ ಪೂರೈಕೆ ಮಾಡಿದಲ್ಲಿ ಶಾಶ್ವತ ಪರಿಹಾರಕಂಡುಕೊಂಡಂತಾಗುತ್ತದೆ.ಶಾಶ್ವತ ಪರಿಹಾರಕ್ಕಾಗಿಅಗತ್ಯವಿರುವಟ್ಯಾಂಕ್ ನಿರ್ಮಾಣಕ್ಕೆ ಬೇಕಾದಅನುದಾನವನ್ನು ಶಾಸಕರಅನುದಾನದಲ್ಲಿ ನೀಡಲು ಸಿದ್ದನಿದ್ದೇನೆ ಎಂದರು.

         ಕಳೆದ ಏಳು ತಿಂಗಳಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನಕಾಮಗಾರಿಗಾಗಿ ಸುಮಾರು 300 ಕೋಟಿಯಷ್ಟು ಅನುದಾನವನ್ನು ಪಡೆಯಲಾಗಿದೆ. ಬಿ.ದುರ್ಗದಿಂದ ಎನ್.ಜಿ.ಹಳ್ಳಿ ಗೇಟ್‍ವರೆಗೆರಸ್ತೆ ನಿರ್ಮಾಣಕ್ಕೆ ಮಂಜೂರಾಗಿದ್ದು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಹಾಗೂ ಕಾಳಘಟ್ಟ ಲಂಬಾಣಿಹಟ್ಟಿಯಿಂದ ಸಾಸಲು ರಸ್ತೆಯನ್ನು1.10 ಕೋಟಿಯಲ್ಲಿಎರಡುರಸ್ತೆಅಭಿವೃದ್ದಿ ಮಾಡಲಾಗುತ್ತಿದೆ. ಈ ರಸ್ತೆ ಅನೇಕ ವರ್ಷಗಳಿಂದ ಅಭಿವೃದ್ದಿಯಾಗದೆ ಈ ಭಾಗದಜನರಿಗೆ ಸಾಕಷ್ಟು ತೊಂದರೆಯಾಗಿತ್ತುಎಂದರು.

          ಜಿಲ್ಲಾಧಿಕಾರಿ ವಿನೋತ್ ಪ್ರಿಯಾರವರುಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ವಿಳಂಬವಿಲ್ಲದೆಇತ್ಯರ್ಥ ಮಾಡಿಜನರಿಗೆಅಗತ್ಯ ಸೌಲಭ್ಯಕಲ್ಪಿಸಲು ತಿಳಿಸಿದರು. ಹಾಗೂ ಸಾಮಾಜಿಕ ಭದ್ರತಾಯೋಜನೆಯಡಿ ಮಾಸಾಶನ ಮಂಜೂರಾತಿಆದೇಶ ಹಾಗೂ ಅನಿಲಭಾಗ್ಯದಡಿ ಸಿಲಿಂಡರ್ ಮತ್ತು ಸ್ಟವ್ ವಿತರಣೆ ಮಾಡಿದರು.

         ಜನಸ್ಪಂದನಾಆರಂಭಕ್ಕೂ ಮೊದಲುಜನರಿಗಾಗಿಉಚಿತಆರೋಗ್ಯತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಕಂದಾಯಅದಾಲತ್‍ನಡೆಸಿ ಖಾತೆ, ಪೋಡಿ, ಹದ್ದುಬಸ್ತು, ಜಮೀನಿನ ದಾರಿಗೆ ಸಂಬಂಧಿಸಿದ ಅಹವಾಲುಗಳನ್ನು ಜನರಿಂದ ಸ್ವೀಕರಿಸಿದರು.

         ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎನ್‍ರವೀಂದ್ರ ಮಾತನಾಡಿ ಸರ್ಕಾರದ ಯೋಜನೆಗಳು ಬಹಳಷ್ಟಿದ್ದು, ಕೆಲವರಿಗೆಅದರ ಮಾಹಿತಿಯೇಗೊತ್ತಿಲ್ಲ, ಪ್ರಗತಿಪರರು ಮಾತ್ರಅದರ ಸದ್ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಭಾಗದರೈತರುಉದ್ಯೋಗಖಾತರಿಯೋಜನೆಯ ಮುಖೇನ ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಎರೆಹುಳು ತೊಟ್ಟಿ ನಿರ್ಮಾಣ ಹಾಗೂ ಪಪ್ಪಾಯ ಬೆಳೆಗಳಿಗೆ ಸರ್ಕಾರದಿಂದ ಹಲವು ಯೋಜನೆಗಳಿದ್ದು ಇದನ್ನು ಕೃಷಿ ಮತ್ತುತೋಟಗಾರಿಕೆ ಇಲಾಖೆಗಳಿಂದ ಪಡೆಯಬಹುದುಎಂದು ಹೇಳಿದರು.

         ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿಜನಸ್ಪಂದನಾಕಾರ್ಯಕ್ರಮದಡಿಯಲ್ಲಿಜಿಲ್ಲೆಯ ಪ್ರತಿ ಹಳ್ಳಿಯು ಜಿಲ್ಲಾಡಳಿತಕ್ಕೆ ಪರಿಚಿತವಾಗಿ, ಅಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ.ರಸ್ತೆ, ಕುಡಿಯುವ ನೀರು, ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕಲು ತುಂಬ ಉಪಯೋಗಿದೆ.

        ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್. ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ್, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕಎನ್. ಕುಮಾರ್, ತಾಲ್ಲೂಕು ಪಂಚಾಯತ್‍ಅಧ್ಯಕ್ಷೆ ಸುಜಾತಧನಂಜಯ, ಕಾಳಘಟ್ಟ ಗ್ರಾಮಅಭಿವೃದ್ಧಿಅಧಿಕಾರಿ ಬಸವರಾಜ್.,ಗ್ರಾಮ ಪಂಚಾಯತ್ ಸದಸ್ಯರಾದ ಸಾವಿತ್ರಮ್ಮ, ಪುಷ್ಪಇತರೆಅಧಿಕಾರಿಗಳು ಉಪಸ್ಥಿತರಿದ್ದರು.

         ಮುಖ್ಯಮಂತ್ರಿ ಅನಿಲ ಭಾಗ್ಯಯೋಜನೆ ಫಲಾನುಭವಿಗಳಾದ ಲಲಿತಮ್ಮ, ಸುಧಾ , ನಿರ್ಮಲ, ಸರೋಜಮ್ಮ, ಗ್ಯಾಸ್ ಸಿಲಿಂಡರ್ ಮತ್ತು ಒಲೆಗಳ ವಿತರಣೆ ಮತ್ತು ವಿಧವಾ ವೇತನದಲ್ಲಿಗಂಗಮ್ಮ, ಅಂಬಿಕಾ ಸಂಧ್ಯಾ ಸುರಕ್ಷಾಯೋಜನೆಯಲ್ಲಿಕೊಟ್ರಪ್ಪ, ಗುರುಶಾಂತಪ್ಪ, ಹನುಮಕ್ಕ, ಚಂದ್ರಮ್ಮಅಂಗವಿಕಲರಲ್ಲಿ ವೃತ್ವಿಕ್‍ಇವರಿಗೆ ಮಂಜೂರಾತಿ ಪತ್ರಗಳನ್ನು ಜಿಲ್ಲಾಧಿಕಾರಿಗಳು ನೀಡಿದರು.ಗ್ರಾಮದಜನರು ವೃದ್ದಾಪಿ ವೇತನ, ಅಂಗವಿಕಲ ವೇತನ, ವಿಧವ ವೇತನ, ಮತ್ತು ಹೈನುಗಾರಿಕೆಯೋಜನೆ, ನ್ಯಾಯ ಬೆಲೆ ಅಂಗಡಿ ಸೇರಿದಂತೆ 150 ಕ್ಕಿಂತಲೂ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap