ಹೈದಾರಾಬಾದ್:
ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಎಲ್ಲದರಲ್ಲೂ ಮುಂದಿದ್ದಾರೆ ನಿಜ ಹಾಗೆಂದು ಹುಡುಗರಿಗಿಂತ ನಾವೇನು ಕಡಿಮೆ ಎಂದು ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಬ್ಬರು ತರಗತಿಯಲ್ಲೇ ಮದ್ಯಪಾನ ಮಾಡಿದ ಘಟನೆ ನಡೆದಿದೆ.
ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಿಬ್ಬರು ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ತಂಪು ಪಾನೀಯಾದ ಬಾಟಲಿಯಲ್ಲಿ ಮದ್ಯವನ್ನು ತಂದು ಸೇವನೆ ಮಾಡಿದ್ದಾರೆ.
ಮದ್ಯ ಅಮಲಿನಲ್ಲಿ ವಿದ್ಯಾರ್ಥಿನಿಯರು ಬೇರೆ ವಿದ್ಯಾರ್ಥಿಗಳ ಜೊತೆ ಜೋರಾಗಿ ಮಾತನಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ತರಗತಿಯಲ್ಲಿ ಮದ್ಯದ ವಾಸನೆ ಬಂದಿದೆ. ಇದರಿಂದ ಶಿಕ್ಷಕರು ಅನುಮಾನಗೊಂಡು ಜ್ಯೂಸ್ ಬಾಟಲನ್ನು ಕಸಿದುಕೊಂಡು ಪರಿಶೀಲನೆ ಮಾಡಿದಾಗ ತಂಪು ಪಾನೀಯದಲ್ಲಿ ಮದ್ಯ ಮಿಕ್ಸ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣ ಇಬ್ಬರು ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








