ಬಜೆಟ್ ಕುರಿತು ಚರ್ಚಾ ಕಾರ್ಯಕ್ರಮ

ತುಮಕೂರು 

      ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಿ.ಜಿ.ಕಾಲೇಜಿನಲ್ಲಿ ಎಂ.ಕಾಂ. ಹಾಗೂ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಿಗೆ ಕೇಂದ್ರ ಬಜೆಟ್ ಮೇಲೆ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

       ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾವಾಹಿನಿ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ.ಜಯಣ್ಣನವರು ಮಾತನಾಡಿ, ನಮ್ಮಲ್ಲಿರುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಹೇಗೆ ಹಣಕಾಸಿನ ವ್ಯವಹಾರಗಳನ್ನು ಸರಿದೂಗಿಸಿಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಂತಹ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಇಲ್ಲದೆ ಇದ್ದರೆ ದೇಶದ ಪ್ರಗತಿ ಅಸಾಧ ಎಂದರು.

      ಈ ಸಾಲಿನ ಬಜೆಟ್ ಅತ್ಯುತ್ತಮ ಬಜೆಟ್, ಇದು ಮದ್ಯಮ ವರ್ಗದ ರೈತರು, ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸುತ್ತ ಇಂತಹ ಪ್ರಚಲಿತ ವಿಚಾರಗಳನ್ನು ವಿದ್ಯಾರ್ಥಿಗಳು ಚರ್ಚೆ ಮಾಡುವುದರ ಮೂಲಕ ಪಠ್ಯಕ್ಕನುಗುಣವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

       ಈ ಚರ್ಚೆಯಲ್ಲಿ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳು ಭಾಗವಹಿಸಿ, ಜಿ.ಎಸ್.ಟಿ., ಕೃಷಿ, ಕಾರ್ಮಿಕರ ಬಗ್ಗೆ, ತೆರಿಗೆ ಆದಯ ಮಿತಿ, ಮಧ್ಯಮ ವರ್ಗಕ್ಕೆ ಅನುಕೂಲಕರ ಬಜೆಟ್, ಶೇರು ಮಾರುಕಟ್ಟೆ ರಚನೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಿದರು, ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link