ಗುಬ್ಬಿ
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭ್ರಷ್ಠಾಚಾರ ನಿಗ್ರಹ ದಳದ ವತಿಯಿಂದ ನಡೆಸಿದ ಸಾರ್ವಜನಿಕ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 11 ದೂರುಗಳು ಸ್ವೀಕಾರವಾಗಿವೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 6 ಅರ್ಜಿಗಳು, ಅಬಕಾರಿ ಇಲಾಖೆಯ ಒಂದು ಅರ್ಜಿ, ತಾಲ್ಲೂಕು ಪಂಚಾಯ್ತಿಗೆ ಒಂದು ಅರ್ಜಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಒಂದು ಅರ್ಜಿ, ಭೂಮಾಪನ ಇಲಾಖೆಯ ಎರಡು ಅರ್ಜಿಗಳು ಸೇರಿದಂತೆ ಒಟ್ಟು 11 ಅರ್ಜಿಗಳು ಸಲ್ಲಿಕೆಯಾಗಿದ್ದು, ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕಳುಹಿಸಿ ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸೂಚಿಸಲಾಗುವುದೆಂದು ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ವಿ.ರಘುಕುಮಾರ್ ತಿಳಿಸಿದರು.ಸಭೆಯಲ್ಲಿ ಇನ್ಸ್ಪೆಕ್ಟರ್ ಹಾಲಪ್ಪ, ಸಿಬ್ಬಂದಿಗಳಾದ ಗಿರೀಶ್, ನರಸಿಂಹರಾಜು, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ