ಪ್ರಧಾನಿಯಿಂದ ದ.ಕೊರಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣ!!February 21, 2019By Prajapragathi52Lead Newsವಿದೇಶಸಿಯೋಲ್: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅಲ್ಲಿ ಭಾರತದ ರಾಷ್ಟ್ರಪಿತ ಹಾಗೂ ಶಾಂತಿಧೂತ ಮಹಾತ್ಮಾ ಗಾಂಧಿ ಅವರ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಿದ್ದಾರೆ. ಇಂದು ಯೋನ್ಸೆ ವಿವಿಗೆ ಭೇಟಿ ನೀಡಿ, ಮಾತನಾಡಿದ ಪ್ರಧಾನಿ, ಶಾಂತಿಧೂತ ಮಹಾತ್ಮಗಾಂಧಿ ಅವರ ಆದರ್ಶಗಳು ಇಂದಿನ ಉಗ್ರವಾದದಿಂದ ಮುಕ್ತಿ ಪಡೆಯಲು ಹೆಚ್ಚು ಸಹಕಾರಿ. ಅಷ್ಟೇ ಅಲ್ಲ ಪರಿಸರ ನಾಶ ಹಾಗೂ ಉಗ್ರಗಾಮಿ ಚಟುವಟಿಕೆಗಳು ಇಂದು ವಿಶ್ವ ಎದುರಿಸುತ್ತಿರುವ ಮಹಾ ಸವಾಲುಗಳಾಗಿವೆ. ಇವುಗಳನ್ನ ಎದುರಿಸಲು ಮಹಾತ್ಮಗಾಂಧಿ ಅವರ ಚಿಂತನೆಗಳು ಬಹಳಷ್ಟು ಸಹಕಾರಿ ಎಂದು ಮೋದಿ ಪ್ರತಿಪಾದಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ಭೇಟಿಯಲ್ಲಿ ಹಲವು ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವಸಂಸ್ಥೆ ಮಾಜಿ ಪ್ರಧಾನಕಾರ್ಯದರ್ಶಿ ಬಾನ್-ಕಿ-ಮೂನ್ ಹಾಜರಿದ್ದರು. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ Share via: Facebook WhatsApp Telegram Twitter More Recent Articlesಸಚಿವ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ..! Lead News May 27, 2026 ಶಂಕಿತ ಉಗಾಂಡಾ ಮಹಿಳೆಯ ಎಬೋಲಾ ವರದಿ ನೆಗೆಟಿವ್: ನಿರಾಳ Lead News May 27, 2026 ಡೀಮ್ಡ್ ಫಾರೆಸ್ಟ್ ಜಂಟಿ ಸಭೆ. Lead News May 27, 2026 ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ Lead News May 27, 2026 2023ರ ಮೇ ಒಪ್ಪಂದ ಪಾಲಿಸಲಿರುವ ಸಿದ್ದರಾಮಯ್ಯ: ಹೈಕಮಾಂಡ್ಗೆ ಕೊಟ್ಟ ಮಾತಿಗೆ ಸಿಎಂ ಕಟ್ಟುನಿಟ್ಟು! Lead News May 27, 2026 Related Stories Lead Newsಸಚಿವ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ..! Prajapragathi - May 27, 2026 Lead Newsಶಂಕಿತ ಉಗಾಂಡಾ ಮಹಿಳೆಯ ಎಬೋಲಾ ವರದಿ ನೆಗೆಟಿವ್: ನಿರಾಳ Prajapragathi - May 27, 2026 Lead Newsಡೀಮ್ಡ್ ಫಾರೆಸ್ಟ್ ಜಂಟಿ ಸಭೆ. Prajapragathi - May 27, 2026 Lead Newsರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ Prajapragathi - May 27, 2026 Lead News2023ರ ಮೇ ಒಪ್ಪಂದ ಪಾಲಿಸಲಿರುವ ಸಿದ್ದರಾಮಯ್ಯ: ಹೈಕಮಾಂಡ್ಗೆ ಕೊಟ್ಟ ಮಾತಿಗೆ ಸಿಎಂ ಕಟ್ಟುನಿಟ್ಟು! Prajapragathi - May 27, 2026