ಗುಬ್ಬಿ
ಧರ್ಮ ಮತ್ತು ಧಾರ್ಮಿಕ ಮೌಲ್ಯಗಳಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದ್ದು ಗ್ರಾಮೀಣ ಜನತೆ ಇಂದಿಗೂ ಸನಾತನ ಧಾರ್ಮಿಕ ಆಚರಣೆಗಳನ್ನು ನಡೆಸುವುದರ ಜೊತೆಗೆ ಉತ್ತಮ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಸಿ.ಎಸ್.ಪುರ ಹೋಬಳಿ ನರಸಿಂಹದೇವರಹಟ್ಟಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಶ್ರೀ ವೀರಮುದ್ದಪ್ಪ ಸ್ವಾಮಿ ದೇವಾಲಯದ ಬೃಹತ್ ಕೌಂಪೌಂಡ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಆದುನೀಕತೆ ಬೆಳೆದಂತೆ ನಮ್ಮ ಧಾರ್ಮಿಕ ಆಚರಣೆಗಳು ಮತ್ತು ಧಾರ್ಮಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಇಂದಿಗೂ ಗ್ರಾಮೀಣ ಜನತೆ ಧಾರ್ಮಿಕ ಆಚರಣೆಗಳನ್ನು ನಿರಂತರವಾಗಿ ಆಚರಿಸಿಕೊಂಡು ಬರುತ್ತಿದ್ದು ಗ್ರಾಮಗಳಲ್ಲಿ ಸೌಹಾರ್ಧಯುತ ವಾತಾವರಣ ನಿರ್ಮಿಸುತ್ತಿದ್ದಾರೆಂದು ತಿಳಿಸಿದರು.
ಪ್ರತಿ ಗ್ರಾಮದಲ್ಲಿ ದೇವಾಲಯ ಮತ್ತು ಶಾಲೆಗಳು ಇದ್ದರೆ ಜನರ ಭಾವನೆಗಳು ಉತ್ತಮವಾಗಿರುತ್ತವೆ ಅಲ್ಲದೆ ಸಾಮಾಜಿಕ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮಧಿ ದೊರೆಯುತ್ತದೆ ಎಂದು ತಿಳಿಸಿದ ಅವರು ಭಕ್ತಿ ಭಾವನೆಗಳಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಿದ್ದು ಈನಿಟ್ಟಿನಲ್ಲಿ ನಮ್ಮ ಸಾಮಾಜಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗಬೇಕಿದೆ ಎಂದು ತಿಳಿಸಿದರು.
ದೇವರ ಮೇಲೆ ಭಯ ಭಕ್ತಿ ಇರಬೇಕು ಅದರಂತೆ ಕಾಯಕವೇ ಕೈಲಾಸವಾಗಬೇಕು ಪ್ರತಿಯೂಬ್ಬ ವ್ಯಕ್ತಿಯು ಸಹ ಸಮಾಜದಲ್ಲಿ ಬದುಕುವಾಗ ಶುದ್ದ ವ್ಯಕ್ತಿತ್ವ ಇಟ್ಟು ಜೀವನ ಮಾಡಬೇಕು ಸಾಕಷ್ಟು ಜನರ ಬಳಿ ಇಂದು ಹಣವಿದೆ ಆದರೆ ಅದನ್ನು ಕೇವಲ ಸ್ವಾರ್ಥಕ್ಕಾಗಿ ಮಾತ್ರ ಬಳಸದೆ ಸಮಾಜದ ಅಭಿವೃದ್ದಿಗೆ ಒಂದಷ್ಟು ಹಣ ಬಳಕೆ ಮಾಡಿದಾಗ ಅವರ ಹೆಸರು ಹಾಗೂ ಗ್ರಾಮಗಳ ಅಭಿವೃದ್ದಿಯಾಗಲು ದಾರಿಯಾಗುತ್ತದೆ ಇಂದಿನ ಸಮಾಜದಲ್ಲಿ ಬುದ್ದಿವಂತರ ವಿದ್ಯಾವಂತರ ಪ್ರಮಾಣ ಹೆಚ್ಚುತ್ತಿದೆ ಆದರೆ ಅದರ ಜೊತೆಯಲ್ಲಿ ವೃದ್ದಾಶ್ರಮಗಳು ಸಹ ಹೆಚ್ಚುತ್ತಿದೆ ಇದಕ್ಕೆ ಕಾರಣ ಹಣದ ಹಿಂದೆ ಓಡುತ್ತಿರುವ ಜನ ತಂದೆ ತಾಯಿಯನ್ನು ಮರೆಯುತ್ತಿರುವುದು ದುರಂತದ ವಿಚಾರವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಜೀವನದಲ್ಲಿ ಸಾಧನೆ ಬಹಳ ಮುಖ್ಯವಾಗಿದ್ದು ಹುಟ್ಟಿದ ಮೇಲೆ ಬೇರೆಯವರಿಗೆ ಕೆಡಕು ಮಾಡದೆ ಒಳಿತು ಮಾಡುವಂತಹ ಕೆಲಸವನ್ನು ಎಲ್ಲರೂ ಮಾಡಬೇಕು ಅಧಿಕಾರ ಅಂತಸ್ತು,ಎಲ್ಲವು ಬರಬಹುದು ಎಲ್ಲವೂ ಹೋಗಬಹುದು ಆದರೆ ಬದುಕಿದ್ದ ಸಮಯದಲ್ಲಿ ನಾವು ಮಾಡಿದ್ದ ಸೇವೆ ಶಾಶ್ವತವಾಗಿ ಉಳಿಯುತ್ತವೆ ಎಂದು ತಿಳಿಸಿದರು.
ಮಾಜಿ ಎಪಿಎಂಸಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ ಈ ದೇವಾಲಯಕ್ಕೆ ಸುಮಾರು 20 ಲಕ್ಷ ಹಣದಲ್ಲಿ ಕೌಂಪೌಂಡ್ ಮಾಡಿಸಿದ್ದು ಇಲ್ಲಿನ ದೇವರಿಗೆ ನಾವು ನಡೆದುಕೊಂಡ ಮೇಲೆ ನಮಗೆ ಆರ್ಥಿಕವಾಗಿ ಹೆಚ್ಚು ಶಕ್ತಿ ಬಂದಿದ್ದು ಹಾಗಾಗಿ ಈ ಸೇವಾಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಚಿಕ್ಕಣ್ಣ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪಾಪಣ್ಣ ಮಾತನಾಡಿ ಯಾವುದೇ ಒಂದು ದೇವಾಲಯಕ್ಕೆ ಗುಡಿ ಗೋಪುರದಂತೆ ಕೌಂಪೌಂಡ್ ಸಹ ಮುಖ್ಯವಾಗಿದ್ದು ಇದರಿಂದ ದೇವಾಲಯದ ಸ್ವಚ್ಚತೆಗೆ ಹೆಚ್ಚು ಅನುಕೂಲವಾಗುತ್ತದೆ ಇಂತಹ ಚಿಕ್ಕ ಗ್ರಾಮಗಳಲ್ಲಿಯು ಎಲ್ಲರ ಒಟ್ಟು ಗೂಡಿ ಧಾರ್ಮಿಕವಾಗಿ ದೇವಾಲಯ ನಿರ್ಮಾಣ ಮಾಡಿದ್ದಾರೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯಾಗಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರಿಗೆ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಿದರು.ದೇವಾಲಯಕ್ಕೆ ಸಂಸದ ಎಸ್.ಪಿ.ಮುದ್ದಹನುಮೆಗೌಡ, ಶಾಸಕ ಮಸಾಲೆಜಯರಾಂ ಸೇರಿದಂತೆ ಹಲವು ಜನಪ್ರತಿನಿಧಿಗಳು ಬೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ತಿಮ್ಮಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಸದಸ್ಯ ತಿಮ್ಮರಾಜು, ಗ್ರಾ.ಪಂ ಸದಸ್ಯ ಚನ್ನೇನಹಳ್ಳಿ ಸೋಮಣ್ಣ, ಮುಖಂಡರಾದ ನಾಗರಾಜು, ನರಸೇಗೌಡ, ಮಹೇಶ್, ಸಿದ್ದರಾಮಯ್ಯ, ನರಸೆಗೌಡ, ಪ್ರಕಾಶ್, ನಂಜೆಗೌಡ, ಚನ್ನೇನಹಳ್ಳಿ ಸೋಮಣ್ಣ, ಉದ್ಯಮಿ ಶ್ರೀನಿವಾಸ್, ದಿನೇಶ್, ಮಂಜುನಾಥ್, ಈರಣ್ಣ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
