ಕುಣಿಗಲ್
ಗುಣಮಟ್ಟದ ಕಾಮಗಾರಿಗಳನ್ನ ಗುತ್ತಿಗೆದಾರರು ಸರಿಯಾಗಿ ಮಾಡುವಂತೆ, ಇದರಲ್ಲಿ ಯಾವುದೇ ರಾಜಿ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಶಾಸಕ ಡಾ|| ಹೆಚ್.ಡಿ.ರಂಗನಾಥ್ ಎಚ್ಚರಿಸಿದರು.
ಪಟ್ಟಣದ ಪುರಸಭೆಯ 13ನೇ ಹಣಕಾಸು ಹಾಗೂ ಎಸ್.ಎಫ್.ಸಿ ಯೋಜನೆಯ ಅಡಿಯಲ್ಲಿ ಲೋಕೋಪಯೋಗಿ ಕಚೇರಿಯ ಆವರಣದಲ್ಲಿ ನೂತನವಾಗಿ 1.28 ಲಕ್ಷ ವೆಚ್ಚದಲ್ಲಿ ಓವರ್ ಟ್ಯಾಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ, ಕುಣಿಗಲ್ ಪಟ್ಟಣದ ದೊಡ್ಡಪೇಟೆ, ಕೋಟೆ ಸೇರಿದಂತೆ ಬಹುತೇಕ ವಾರ್ಡುಗಳಿಗೆ ಸುಮಾರು 5 ಲಕ್ಷ ಸಾಮಥ್ರ್ಯ ಉಳ್ಳ ನೀರಿನ ಓವರ್ ಟ್ಯಾಂಕ್ ನಿರ್ಮಾಣ ಕೈಗೊಳ್ಳುತ್ತಿದ್ದು, ಇದರ ಕಾಮಗಾರಿಯನ್ನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮರ್ಪಕವಾಗಿ ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳುವುದರ ಜೊತೆಗೆ,
ಈ ಟ್ಯಾಂಕರ್ ನಿರ್ಮಾಣದ ಹೊಣೆಯನ್ನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದ್ದು, ಆದಷ್ಟು ಶೀಘ್ರವಾಗಿ ಗುಣಮಟ್ಟದ ಕಾಮಗಾರಿಯನ್ನ ಪೂರ್ಣಗೊಳಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಪುರಸಭಾ ಸದಸ್ಯರಾದ ಕೆ.ಎಲ್.ಹರೀಶ್ ಸೇರಿದಂತೆ ಹಲವಾರು ಸದಸ್ಯರನ್ನ ಸಭೆಗೆ ಕರೆಯದೆ ಇರುವ ಬಗ್ಗೆ ಶಾಸಕರಿಗೆ ಸದಸ್ಯರು ದೂರು ಸಲ್ಲಿಸಿ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೇಡ ಎಂದು ತಿಳಿಸಿದರು.
ಹೌಸಿಂಗ್ ಬೋರ್ಡ್ ಕಾಲನಿಯ ಹಿರಿಯ ನಾಗರೀಕರು , ಮಹಿಳೆಯರು, ಶಾಸಕರಿಗೆ ದೂರು ಸಲ್ಲಿಸಿ ಈ ಭಾಗದ ಕೆಲವು ರಸ್ತೆಗಳಿಗೆ ಡಾಂಬರೀಕರಣ, ಚರಂಡಿ , ರಸ್ತೆ ಮಾಡಲು ಪುರಸಭಾ ಸದಸ್ಯ ಪಾಪಣ್ಣ ಅಡ್ಡಿ ಪಡಿಸುತ್ತಾ ನೀವುಗಳು ನಮಗೆ ಮತ ನೀಡಿಲ್ಲ. ಆದ್ದರಿಂದ ಕಾಮಗಾರಿ ಮಾಡಿಸುವುದಿಲ್ಲ ಎಂದು ಹೇಳುತ್ತಾರೆ ಎಂದು ಶಾಸಕರಿಗೆ ಸದಸ್ಯರ ಸಮ್ಮುಖದಲ್ಲೇ ದೂರು ಸಲ್ಲಿಸಿದರು. ಕೂಡಲೇ ರಸ್ತೆಗಳ ದುರಸ್ಥಿ ಮಾಡಿಸುವಂತೆ ಒತ್ತಾಯಿಸಿದರು. ಶಾಸಕರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಾಧಿಕಾರಿ ರಮೇಶ್ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಚಂದ್ರಶೇಖರ್, ಮುಖ್ಯಾಧಿಕಾರಿ ರಮೇಶ್, ಪಿಡಬ್ಲ್ಯೂ ಎಇಇ ದಿವಾಕರ್, ಪುರಸಭೆಯ ಜೆಇಇ ಸುಮಾ, ಗುತ್ತಿಗೆದಾರ ಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಅಧ್ಯಕ್ಷರಾದ ನಳಿನಾ, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ಚಂದ್ರಶೇಖರ್ , ಪಾಪಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
