ಚಿತ್ರದುರ್ಗ
ಇಂದಿನ ದಿನಮಾನದಲ್ಲಿ ವೈಜ್ಞಾನಿಕವಾದ ಸತ್ಯವನ್ನು ತಿಳಿದಾಗ ಮಾತ್ರ ಮೂಢನಂಬಿಕೆ ದೂರವಾಗಲು ಸಾಧ್ಯವಿದೆ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಸಹ ನಿರ್ದೇಶಕರಾದ ಎಂ.ರೇವಣಸಿದ್ದಪ್ಪ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ರಿ.) ಬೆಂಗಳೂರು ಕ.ರಾ.ವಿ.ಪ ಜಿಲ್ಲಾ ಸಮಿತಿ, ಚಿತ್ರದುರ್ಗ ಹಾಗೂ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆದ ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ ಬಹುಮಾನ ವಿತರಣೆ ಮತ್ತು ಉಪನ್ಯಾಸ ಸಮಾರಂಭದ ಅಧ್ಯಕ್ಷತೆಯವಹಿಸಿ ಮಾತನಾಡಿದರು.
ಮೂಢನಂಬಿಕೆಯನ್ನು ಅನಕ್ಷರಸ್ಥರಿಗಿಂತ ಅಕ್ಷರಸ್ಥರು ಹೆಚ್ಚಾಗಿ ನಂಬುತ್ತಾರೆ, ಬೆಕ್ಕು ಅಡ್ಡ ಬಂದರೆ ಹೋಗುವ ಕೆಲಸವಾಗುವುದಿಲ್ಲ, ಒಂಟಿ ಸೀನು ಬಂದರೆ ಸಹಾ ಅವಶಕುನ ಎಂಬ ಮಾತುಗಳು ಕೇಳಿ ಬರುತ್ತದೆ ವಿಜ್ಞಾನ ಇಷ್ಟು ಮುಂದುವರೆದಿದ್ದೆರೂ ಸಹಾ ಇನ್ನೂ ಮೂಢನಂಬಿಕೆ ಜೀವಂತವಾಗಿದೆ. ಇದನ್ನು ತಪ್ಪಿಸಬೇಕಾದರೆ ಭಾವಿ ಶಿಕ್ಷಕರುಗಳಾದ ನೀವುಗಳು ವಿಜ್ಞಾನದ ಮಹತ್ವವನ್ನು ಸರಿಯಾದ ರೀತಿಯಲ್ಲಿ ತಿಳಿದರೆ ಮುಂದೆ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಭೋಧನೆ ಮಾಡಲು ಸಾಧ್ಯವಿದೆ ಎಂದರು.
ದೇವರ ಮೇಲೆ ಭಕ್ತಿಬರಬೇಕು ಇದು ಭಯದಿಂದ ಬರವಾರದು ಈ ರೀತಿಯಾಗಿ ಬಂದರೆ ಅದು ನಿಜವಾದ ಭಕ್ತಿಯಾಗುವುದಿಲ್ಲ, ವಿಜ್ಞಾನವನ್ನು ಸರಿಯಾದ ರೀತಿಯಲ್ಲಿ ತಿಳಿದರೆ ಮಾತ್ರ ಮೂಢನಂಬಿಕೆವನ್ನು ಜೀವನದಲ್ಲಿ ದೂರ ಇಡಲು ಸಾಧ್ಯವಿದೆ ಇದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಗಮನ ನೀಡುವಂತೆ ರೇವಣಸಿದ್ದಪ್ಪ ಕರೆ ನೀಡಿದರು.
ಕ.ರಾ.ವಿ.ಪ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಎಂ.ಆರ್. ದಾಸೇಗೌಡ ಮಾತನಾಡಿ. ವೈಜ್ಞಾನಿಕವಾದ ಮನೋಭಾವ ಬೆಳಯಬೇಕಿದೆ ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ, ನಮ್ಮಲ್ಲಿ ವಿಜ್ಞಾನದ ಸಾಕ್ಷರತೆ ಹೆಚ್ಚಾಗಬೇಕಿದೆ ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಮುಂದೆ ಶಿಕ್ಷಕರಾಗುವವರು ಮುಂಚೆ ವಿಜ್ಞಾನದ ಬಗ್ಗೆ ಸರಿಯಾಗಿ ತಿಳಿದಿದ್ದರೆ ಮಾತ್ರ ಮಕ್ಕಳಿಗೆ ಅದರ ಬಗ್ಗೆ ಭೋಧನೆ ಮಾಡಲು ಸಾಧ್ಯವಿದೆ. ವೃತ್ತಿ ಜೀವನದಲ್ಲಿ ಜಯ ಪಡೆಯಬೇಕಾದರೆ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಪಡೆಯಲು ಸಾಧ್ಯವಿದೆ ಪ್ರತಿಯೊಬ್ಬರು ಸಹಾ ವಿಜ್ಞಾನದ ಸ್ಥನಿಕರಾಗಬೇಕಿದೆ ಎಂದು ಕಿವಿ ಮಾತು ಹೇಳಿದರು.
ಕ.ರಾ.ವಿ.ಪ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಚಳ್ಳಕೆರೆ ಯರ್ರಿಸ್ವಾಮಿ ಉಪನ್ಯಾಸ ನೀಡಿದರು. ಕ.ರಾ.ವಿ.ಪ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಹೆಚ್.ಎಸ್.ಟಿ. ಸ್ವಾಮಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಟಿ.ಶಂಕರಪ್ಪ ಬಹುಮಾನ ವಿತರಣೆ ಮಾಡಿದರು. ಖಜಾಂಚಿ ಕೆ.ವಿ ನಾಗಲಿಂಗರೆಡ್ಡಿ, ಸಹ ಕಾರ್ಯದರ್ಶಿ ಟಿ.ಹನುಮಂತಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆಗಾಗಿ ಹಮ್ಮಿಕೊಂಡಿದ್ದ ಭಾಷಣ ಸ್ಫರ್ದೆಯಲ್ಲಿ ವಿಜೇತರಾದ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯ ಐಸಿರಿ ಪ್ರಥಮ, ಚಳ್ಳಕೆರೆ ಕುವೆಂಪು ಶಾಲೆಯ ವಿಶೇಷ್ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ನಾಗಅಮೃತ್ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








