ಚಿತ್ರದುರ್ಗ:
ಕಬೀರಾನಂದಾಶ್ರಮ ಮಹಾಶಿವರಾತ್ರಿ ಮಹೋತ್ಸವದ ಜೊತೆಗೆ ಸಮಾಜ ಸುಧಾರಣೆ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದರು.ಕಬೀರಾನಂದಾಶ್ರಮದಿಂದ ಫೆ.28 ರಿಂದ ಮಾ.5 ರವರೆಗೆ ನಡೆಯುವ 89 ನೇ ಮಹಾಶಿವರಾತ್ರಿ ಮಹೋತ್ಸವದ ನಿಮಿತ್ತ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಮಹಾಸ್ವಾಮಿಗಳು ಮಹಾಶಿವರಾತ್ರಿ ಮಹೋತ್ಸವದ ಜೊತೆಯಲ್ಲಿಯೇ ಜ್ಞಾನ ದಾಸೋಹ, ಅನ್ನದಾಸೋಹವನ್ನು ನೀಡುತ್ತಿದ್ದಾರೆ. ವೃದ್ದಾಶ್ರಮ, ಅನಾಥಾಶ್ರಮವನ್ನು ತೆರೆದು ಮಾನವೀಯತೆ ಮೆರೆದಿದ್ದಾರೆ. ಜನಪರ ಕಾಳಜಿಯುಳ್ಳ ಕಬೀರಾನಂದಾಶ್ರಮ ವಿಸ್ತಾರವಾಗಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಲಿಂಗಾನಂದಸ್ವಾಮಿ ಮಾತನಾಡಿ ಈ ಬಾರಿಯ 89 ನೇ ಮಹಾಶಿವರಾತ್ರಿ ಮಹೋತ್ಸವದಲ್ಲಿ ಬುಡಕಟ್ಟು ಜನಾಂಗದ ಸುಕ್ರಜ್ಜಿಗೆ ಆರೂಢಶ್ರಿ ಪ್ರಶಸ್ತಿ ನೀಡಲಾಗುವುದು. ದೇಶದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ. ನಾವು ಮನುಷ್ಯನ್ನು ಮನುಷ್ಯನನ್ನಾಗಿ ನೋಡುತ್ತಿದ್ದೇವೆ. ಗಾಂಧಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಇಂತಹ ಪವಿತ್ರವಾದ ಭೂಮಿಯಲ್ಲಿ ಭಯೋತ್ಪಾದನೆ, ಜಾತಿಯತೆ ಇನ್ನು ಜೀವಂತವಾಗಿರುವುದು ನೋವಿನ ಸಂಗತಿ. ಆರೂಢ ಪರಂಪರೆಯ ನಮ್ಮ ಮಠದಿಂದ 89 ನೇ ಮಹಾಶಿವರಾತ್ರಿ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಇದಕ್ಕೆ ಅಪಾರ ಭಕ್ತರು ಸಹಕರಿಸುತ್ತಿದ್ದಾರೆ ಎಂದು ಸ್ಮರಿಸಿಕೊಂಡರು.ವಿ.ಎಲ್.ಪ್ರಶಾಂತ್, ಜಾನಪದ ಹಾಡುಗಾರ ಚಂದ್ರಪ್ಪ ಕಾಲ್ಕೆರೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.