ಹೊಸದಿಲ್ಲಿ:

ಭದ್ರತಾ ಪರಿಸ್ಥಿತಿ ಪರಿಶೀಲನೆಯ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಾರ್ಯಕ್ರಮವೊಂದರಿಂದ ಹಠಾತ್ ನಿರ್ಗಮಿಸಿದ್ದಾರೆ.
ಭಾರತ-ಪಾಕ್ ನಡುವೆ ಪರಿಸ್ಥಿತಿ ವಿಷಮವಾಗುತ್ತಿರುವ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಿಂದ ಅರ್ಧದಲ್ಲೇ ಎದ್ದು ಹೊರನಡೆಡಿದ್ದಾರೆ.
ರಾಷ್ಟ್ರೀಯ ಯುವ ಉತ್ಸವ 2019ನಲ್ಲಿ ಯುವಕರ ಪ್ರಶ್ನೆಗಳಿಗೆ ಮೋದಿ ಉತ್ತರಿಸುತ್ತಿದ್ದರು. ಆಗ ಪ್ರಧಾನ ಮಂತ್ರಿ ಕಾರ್ಯಾಲಯದ ಸಿಬ್ಬಂದಿಯೊಬ್ಬರು, ಚೀಟಿ ತಂದಿತ್ತರು. ಅದನ್ನು ನೋಡಿದ ಕೂಡಲೇ ಭಾಷಣ ನಿಲ್ಲಿಸಿದ ಮೋದಿ ತಕ್ಷಣ ನಿರ್ಗಮಿಸಿದರು. ಭಾರತದ ವಾಯು ಪ್ರದೇಶವನ್ನು ಪಾಕ್ ಉಲ್ಲಂಘಿಸಿದ ವಿಷಯಕ್ಕೆ ಸಂಬಂಧಿಸಿ ಸುರಕ್ಷತಾ ಪರಿಸ್ಥಿತಿ ಕುರಿತು ಸಭೆಗೆ ತೆರಳಿದರು.
ಬುಧವಾರ ಬೆಳಗ್ಗಿನಿಂದ ಪಾಕಿಸ್ತಾನಿ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿಯನ್ನೂ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಅಲರ್ಟ್ ಘೋಷಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








