ನೇಪಾಳ:
ಹೆಲಿಕಾಫ್ಟರ್ ಪತತಗೊಂಡು ನೇಪಾಳದ ಪ್ರವಾಸೋಧ್ಯಮ ಸಚಿವ ಸೇರಿದಂತೆ ಹೆಲಿಕಾಫ್ಟರ್ ನಲ್ಲಿದ್ದ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ನೇಪಾಳದ ಪ್ರವಾಸೋದ್ಯಮ ಸಚಿವ ರಬೀಂದ್ರ ಅಧಿಕಾರಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ತಾಪ್ಲೇಜುಂಗ್ ಜಿಲ್ಲೆಯ ಪಾಥಿಭರಾದಲ್ಲಿ ಪತನಗೊಂಡಿದೆ.
ಸಚಿವ ರವೀಂದ್ರ ಅಧಿಕಾರಿ ಸೇರಿದಂತೆ ಹೆಲಿಕಾಪ್ಟರ್ನಲ್ಲಿದ್ದ ಪೈಲಟ್ ಕ್ಯಾಪ್ಟನ್ ಪ್ರಭಾಕರ್ ಕೆ.ಸಿ., ಪ್ರವಾಸೋದ್ಯಮದ ಉದ್ಯಮಿ ಆಂಗ್ ಛಿರಿಂಗ್ ಶೆರ್ಪ, ಭದ್ರತಾ ಸಿಬ್ಬಂದಿ ಅರ್ಜುನ್ ಘಿಮಿರೆ, ಪ್ರಧಾನಿ ಆಪ್ತ ಯುವರಾಜ್ ದಹಾಲ್, ವೀರೇಂದ್ರ ಶ್ರೇಷ್ಠ ಸಾವಿಗೀಡಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
