ಬೆಂಗಳೂರು
ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್ ಅವರು ಜೈಲು ಸೇರಿ ಹಲವು ದಿನಗಳು ಕಳೆದರೂ ಇನ್ನು ಜಾಮೀನು ದೊರೆತಿಲ್ಲ
ಪರಪ್ಪನ ಅಗ್ರಹಾರದಲ್ಲಿರುವ ಕಂಪ್ಲಿ ಗಣೇಶ್, ಸುಲಭವಾಗಿ ಜಾಮೀನು ಸಿಗಬಹುದಾದರೂ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿಲ್ಲ.ಎಕಂದರೆ ಈ ಜಾಮೀನು ಅರ್ಜಿಯ ಹಿಂದೆ ಕಾಂಗ್ರೆಸ್ ಬಿಜೆಪಿ ಕೈವಾಡವಿದೆ ಎನ್ನಲಾಗಿದೆ.ಕಂಪ್ಲಿ ಗಣೇಶ್ಗೆ ಜಾಮೀನು ಕೊಡಿಸಲು ಬಿಜೆಪಿ ಅವರು ವಕೀಲರ ಸಂಪರ್ಕ ಮಾಡಿದ್ದಾರೆ. ಆದರೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಡಿ ಎಂದು ಕಾಂಗ್ರೆಸ್ ನಾಯಕರು ವಕೀಲರ ಮೇಲೆ ಒತ್ತಡ ಹೇರಿದ್ದಾರೆ.ಒಂದು ವೇಳೆ ಜಾಮೀನು ದೊರೆತರೆ ಗಣೇಶ್ ಬಿಜೆಪಿ ಸೇರುವ ಭೀತಿಯಿಂದ ಕಾಂಗ್ರೆಸ್ ನಾಯಕರು ಈ ರೀತಿ ಹೇಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಹಿನ್ನಡೆ ಭೀತಿ ಎದುರಾಗಿದ್ದು, ಹೀಗಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಡಿ ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರೆ. ಇಬ್ಬರ ಜಗಳದಿಂದಾಗಿ ಗಣೇಶ್ ಜೈಲಿನಲ್ಲೇ ದಿನ ದೂಡುತ್ತಿದ್ದಾರೆ.ಒಂದೇ ದಿನದಲ್ಲಿ ಜಾಮೀನು ದೊರೆಯುವ ನಿರೀಕ್ಷೆಯಲ್ಲಿದ್ದ ಕಂಪ್ಲಿ ಗಣೇಶ್, ಈಗ ಉಭಯ ಪಕ್ಷಗಳ ಜಗಳದಲ್ಲಿ ಸಿಲುಕಿದ್ದಾರೆ.ಲೋಕಸಭಾ ಚುನಾವಣಾ ಮುಗಿಯುವವರೆಗೂ ಜೈಲಿನಲ್ಲಿ ಇರಬೇಕಾದ ಪರಿಸ್ಥತಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








