ಮನುಷ್ಯನಿಗೆ ಕಣ್ಣು ಬಹಳ ಮುಖ್ಯವಾದ ಅಂಗ : ರಾಘವೇಂದ್ರ

ಹಿರಿಯೂರು :

       ಮನುಷ್ಯನಿಗೆ ಕಣ್ಣು ಬಹಳ ಮುಖ್ಯವಾದ ಅಂಗ ಈ ಕಣ್ಣನ್ನು ಆಗಾಗ್ಗೆ ತಪಾಸಣೆ ಮಾಡಿಸುವ ಮೂಲಕ ಅನೇಕ ಕಣ್ಣಿನ ರೋಗಗಳನ್ನು ಹಾಗೂ ಅದರಿಂದಾಗುವ ಅಪಾಯಗಳನ್ನು ತಡೆಗಟ್ಟಬಹುದು ಎಂಬುದಾಗಿ ರೋಟರಿ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ಹೇಳಿದರು.ನಗರದ ಥಿಯಾಸಫಿಕಲ್ ಸೊಸೈಟಿ ಆವರಣದಲ್ಲಿ ರೋಟರಿಕ್ಲಬ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಸರ್ವೋದಯ ಥಿಯೋಸಫಿಕಲ್ ಸೊಸೈಟಿ, ಎಂ.ಆರ್.ಐ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣೆ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ರೆಡ್‍ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರ್‍ರಾಜ್ ಮಾತನಾಡಿ, ರೆಡ್‍ಕ್ರಾಸ್ ರೋಟರಿಯಂತಹ ಸೇವಾಸಂಸ್ಥೆಗಳು ಸಾಮಾಜಿಕ ಕಾಳಜಿ ಹೊಂದಿ ಆರ್ಥಿಕ ದುರ್ಬಲರ ಆರೋಗ್ಯ ರಕ್ಷಣೆಗಾಗಿ ಅನೇಕ ಇಂತಹ ಶಿಬಿರಗಳನ್ನು ಏರ್ಪಡಿಸುತ್ತಲಿದ್ದು, ಈ ಶಿಬಿರಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತಾಗಲಿ ಎಂದರಲ್ಲದೆ ಶಿಬಿರದ ದಾನಿಗಳಾದ ರೋ.ಬಿ.ಕೆ.ನಾಗಣ್ಣ ಹಾಗೂ ಕುಟುಂಬದವರನ್ನು ಅಭಿನಂದಿಸಿದರು.

        ಈ ಕಾರ್ಯಕ್ರಮದಲ್ಲಿ ಶಿಬಿರದ ದಾನಿಗಳಾದ ರೋ|| ಬಿ.ಕೆ.ನಾಗಣ್ಣ, ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್, ರೆಡ್‍ಕ್ರಾಸ್‍ನ ದೇವರಾಜ್‍ಮೂರ್ತಿ, ಸೌಭಾಗ್ಯವತೀದೇವರು, ಪಿ.ಆರ್.ಸತೀಶ್‍ಬಾಬು, ಪರಮೇಶ್ವರಭಟ್, ಮಹಾಬಲೇಶ್ವರಶೆಟ್ಟಿ, ಥಿಯೋಸಫಿಕಲ್ ಸೊಸೈಟಿಯ ರಂಗನಾಥಪ್ಪ, ಎಂಆರ್‍ಟಿ ಕಣ್ಣಿನ ಆಸ್ಪತ್ರೆ ಕೊಂಡ್ಲಳ್ಳಿಯ ನೇತ್ರವೈದ್ಯರಾದ ಡಾ|| ಕೆ.ನಾಗರಾಜ್ ಸಿಬ್ಬಂದಿಗಳಾದ ವೀರೇಶ್, ಸತೀಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap