ದೆಹಲಿ :
ಈಗಾಗಲೇ ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಮಾಡಬೇಕು ಎಂದರೆ ನಾವು ಹೇಳಿದಂತೆ ಕೇಳಿ ಎಂದು ಭಾರತದ ಮೇಲೆ ಶತೃರಾಷ್ಟ್ರ ಒತ್ತಡ ಹೇರುತ್ತಿದೆ.
ನಿನ್ನೆ ನಡೆದ ಪಾಕ್ ಎಫ್- 16 ಹಾಗೂ ನಮ್ಮ ಮಿಗ್ -21 ಕಾಳಗದ ವೇಳೆ ಭಾರತದ ಮಿಗ್ 21 ವಿಮಾನ ಪತನ ಆದಾಗ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ವೀಡಿಯೋ ಸಮೇತ ಹೇಳಿಕೊಂಡಿತ್ತು.
ಅಭಿನಂದನ್ ಬಿಡುಗಡೆ ಮಾಡಬೇಕಾದರೆ, ನೀವು ಚರ್ಚೆಗೆ ಬರಬೇಕು ಎಂದು ಭಾರತದ ಮೇಲೆ ಪಾಕಿಸ್ತಾನ ಬ್ಲ್ಯಾಕ್ಮೇಲ್ ತಂತ್ರವನ್ನು ಆರಂಭಿಸಿದೆ.
ಎರಡು ದಿನಗಳ ವೈಮಾನಿಕ ದಾಳಿಗಳ ನಂತರ ಗುರುವಾರ ರಾಜತಾಂತ್ರಿಕ ಮಟ್ಟದ ಕಲಹಗಳು ಶುರುವಾಗಿವೆ. ಇದರ ಬೆನ್ನಲ್ಲೇ ಎರಡೂ ದೇಶಗಳಲ್ಲಿ ತುರ್ತು ಸಭೆಗಳು ನಿರಂತರವಾಗಿ ನಡೆಯುತ್ತಿವೆ.
ಪುಲ್ವಾಮಾ ದಾಳಿ ಹಾಗೂ ಆ ನಂತರ ಭಾರತೀಯ ವಾಯುಪಡೆಗಳು ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಗುರುವಾರವೂ ಮುಂದುವರಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
