ಹಾಸನ:
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪಾಕ್ ದಾಳಿ ಹೆಚ್ಚತ್ತಲೇ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಮ್ಮ ರಾಷ್ಟ್ರದ ಅವಿಭಾಜ್ಯ ಅಂಗ ಜಮ್ಮು ಕಾಶ್ಮೀರ ಏಕೆ ಇಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಪ್ರಧಾನಿ ಉತ್ತರ ಕೊಡಬೇಕು. ಮೊದಲು ನಮ್ಮ ದೇಶದ ಅಂಗ ಜಮ್ಮು ಕಾಶ್ಮೀರವನ್ನು ಗೌರವದಿಂದ ಕಾಣಬೇಕು. ಬಿಜೆಪಿಯವರು ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನದ ವಿರುದ್ದ ಬರೀ ಅಟ್ಯಾಕ್ ಮಾಡುತ್ತಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಮೈಮಾನಿಕ ದಾಳಿ ನಡೆಸಿದ್ದಾರೆ. ದೇಶದ ಒಳಗಡೆ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ನಾನು ದೇಶದ ರಾಜಕಾರಣವನ್ನು ಗಮನಿಸುತ್ತಿದ್ದೇನೆ. ಕಳೆದ ಬಾರಿ ಪ್ರಧಾನಿ ಮೋದಿಗೆ ಸ್ಪಷ್ಟ ಬಹುಮತ ಬಂದಿತ್ತು. ಈ ನಾಲ್ಕು ವರ್ಷದಲ್ಲಿ ಜಮ್ಮು ಕಾಶ್ಮೀರದಲ್ಲಿ ಮೂರು ಪಕ್ಷಗಳು ಅಧಿಕಾರಕ್ಕೆ ಬಂದವು. ಜಮ್ಮು ಕಾಶ್ಮೀರದಲ್ಲಿ ಯಾವಾಗಲೂ 144 ಸೆಕ್ಷನ್ ಜಾರಿ ಮಾಡಿ ಆಡಳಿತ ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿಗೆ ಕಾಂಗ್ರೆಸ್ ಮೇಲೆ ವೈಯಕ್ತಿಕ ಆಕ್ರೋಶವಿದೆ ಎಂದರು. ಮೋದಿಯ ಆಕ್ರೋಶವನ್ನು ರಾಷ್ಟ್ರದ ಜನರು ನೋಡಿ ತೀರ್ಮಾನ ಮಾಡುತ್ತಾರೆ. ರಾಷ್ಟ್ರದ ಜನರಿಗೆ ರಾಜಕೀಯ ಪ್ರಬುದ್ದತೆ ಮತ್ತು ಶಕ್ತಿ ಇದೆ. ನಮ್ಮ ಶತ್ರು ಉಗ್ರರು, ಉಗ್ರರ ವಿರುದ್ದ ನಮ್ಮ ಹೋರಾಟ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
.
