ವಾಯುಸೇನೆಗೆ ಆನೆಬಲ ತುಂಬಿದ ವಾಣಿಜ್ಯ ಪೈಲೆಟ್ ಗಳು…!!

ನವದೆಹಲಿ:
       ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಗಂಭೀರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ , ಈ ಪರಿಸ್ಥಿತಿಯಲ್ಲಿ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ವಾಯುಸೇನೆಗೆ  ಆನೆಬಲ ಬಂದಿದೆ .
       ಈ ಬಲ ಯಾವುದೆಂದು ನೋಡಿದರೆ ಭಾರತೀಯ ವಾಣಿಜ್ಯ ಪೈಲೆಟ್ ಗಳ ಸಂಘವು ಅವಶ್ಯಬಿದ್ದರೆ ನಾವೂ ಯುದ್ಧ ವಿಮಾನವನ್ನು ಹಾರಿಸುತ್ತೇವೆ ಎಂದು ಹೇಳುವ ಮೂಲಕ ಭಾರತೀಯ ಸೇನೆಯ ಬೆನ್ನಿಗೆ ನಿಂತಿದ್ದಾರೆ.

       ಯುದ್ಧ ಮಾಡುವುದಾದರೆ ನಾವೂ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಉಡಾವಣೆ ಮಾಡುತ್ತೇವೆ ಎಂದು ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರತೀಯ ವಾಣಿಜ್ಯ ಪೈಲಟ್ಸ್ ಅಸೋಸಿಯೇಷನ್(ಐಸಿಪಿಎ) ಹೇಳಿದೆ.

      ನಿನ್ನೆ ಭಾರತದ ವಾಯುಗಡಿಯೊಳಕ್ಕೆ ನುಗ್ಗಲು ಯತ್ನಿಸಿದ ಪಾಕಿಸ್ತಾನದ ಮೂರು ಎಫ್-16 ವಿಮಾನಗಳು ಗಡಿ ದಾಟಿ ಭಾರತದೊಳಗೆ ಬಂದು ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದವು. ಈ ವೇಳೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಅವರಿಗೆ ಪ್ರತಿರೋಧ ತೋರಿ ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಅಲ್ಲದೆ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸುವ ಮೂಲಕ ಪಾಕಿಸ್ತಾನಕ್ಕೆ ಕಟು ಸಂದೇಶವನ್ನು ರವಾನಿಸಿತ್ತು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link