ಎಸಿಬಿ ಬಲೆಗೆ ಬಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಸಿ ಇ ಓ..!!!

 ಗುಬ್ಬಿ

         ನಿಟ್ಟೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿಗೆ ಬೆಳೆ ಸಾಲವನ್ನು ಪಡೆಯಲು ಪ್ರಾಥಮಿಕ ಕೃಷಿ, ಪತ್ತಿನ ಸಹಕಾರ ಸಂಘ (ನಿ) ದೊಡ್ಡಗುಣಿ ಇಲ್ಲಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ರೂ.50,000/- ಸಾಲದ ಹಣ ಮಂಜೂರಾಗಿರುತ್ತದೆ.

         ಶ್ರೀ.ಓಂಕಾರಮೂರ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಾಥಮಿಕ ಕೃಷಿ, ಪತ್ತಿನ ಸಹಕಾರ ಸಂಘ (ನಿ) ದೊಡ್ಡಗುಣಿ ರವರು ಮಂಜೂರಾಗಿರುವ ರೂ.50,000/- ಹಣವನ್ನು ದೂರುದಾರರ ಖಾತೆಗೆ ಜಮಾ ಮಾಡಲು ರೂ.5000/- ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ.

         ದಿನಾಂಕ:28/02/2019 ರಂದು ಶ್ರೀ.ಓಂಕಾರಮೂರ್ತಿ ರವರು ದೂರುದಾರರಿಂದ ರೂ.5,000/- ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ. ಆರೋಪಿತರನ್ನು ದಸ್ತಗಿರಿ ಮಾಡಿ, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ತನಿಖೆ ಮುಂದುವರೆದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link