ಚಿತ್ರದುರ್ಗ
ಕಾರ್ಮೀಕರ ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವರು ಸೇರಿದಂತೆ ಯಾವೊಬ್ಬ ಚುನಾಯಿತ ಪ್ರತಿನಿಧಿಯಾಗಲೀ ಅಧಿಕಾರಿಯಾಗಲಿ ಭಾಗವಹಿಸಿದ್ದಕ್ಕೆ ಬೇಸತ್ತ ಕಾರ್ಮಿಕರು ಸರ್ಕಾರ ಮತ್ತು ಸಚಿವರ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಚಿತ್ರದುರ್ಗ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಇಂದು ಬೆ.10-30 ಕ್ಕೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕಾರ್ಮಿಕ ವಿವಿಧ ಸಂಘಟನೆಗಳಿಗೆ ತಿಳಿಸುವುದರ ಮೂಲಕ ಆಗಮಿಸುವಂತೆ ಕೇಳಿಕೊಳ್ಳಲಾಗಿತ್ತು ಅದರಂತೆ ಸಚಿವ ವೆಂಕಟರಮಣಪ್ಪರವರು ಸಹಾ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿತ್ತು.
ಇದರಂತೆ ಕಾರ್ಮಿಕ ವಿವಿಧ ಸಂಘಟನೆಗಳು ಬೆಳಿಗ್ಗೆ 9 ಗಂಟೆಗೆ ತಮ್ಮ ಕಾರ್ಮಿಕರೊಂದಿಗೆ ತರಾಸು ರಂಗಮಂದಿರಲ್ಲಿ ಆಗಮಿಸಿದ್ದರು ಇವರ ಜೊತೆಯಲ್ಲಿ ಕೆಲವರು ತಮ್ಮ ಕುಟಂಬದವರನ್ನು ಹಾಗೂ ಮಕ್ಕಳನ್ನು ಸಹಾ ಕರೆದುಕೊಂಡು ಬರಲಾಗಿತ್ತು. ಕಾರ್ಯಕ್ರಮದ ಸಮಯ ಹತ್ತಿರವಾಗುತ್ತಿದ್ದರೂ ಕಾರ್ಯಕ್ರಮ ಪ್ರಾರಂಭ ಮಾಡುವ ಲಕ್ಷಣಗಳು ಕಂಡು ಬರಲಿಲ್ಲ ಇದರ ಬದಲಿಗೆ ಕಾಮೀಕರಿಗೆ ಉಪಯುಕ್ತವಾಗುವ ಅಪಘಾತವಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಮಾಹಿತಿಯನ್ನು ನೀಡಿದರು, ಈ ರೀತಿಯ ಕಾರ್ಯಕ್ರಮ ಮದ್ಯಾಹ್ನ 12.30ರವರೆಗೂ ನಡೆಯಿತು.
ಈ ವೇಳೆಗೆ ಸಮಾರಂಭಕ್ಕೆ ಸಚಿವರು ಬರುವುದಿಲ್ಲ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆಯಾಗಿತ್ತು, ಇದದರಿಂದ ಕಾರ್ಯಕ್ರಮ ನಡೆಸುವ ಬಗ್ಗೆ ಯಾರು ಸಹಾ ಅಸಕ್ತಿಯನ್ನು ತೋರಿಸಲಿಲ್ಲ, ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ ಭಾಗವಹಿಸಿದ್ದರು. ಸಚಿವರು ಬಾರದಿದ್ದ ಹಿನ್ನಲೆಯಲ್ಲಿ ಕಾರ್ಮಿಕರಿಗೆ ನೀಡಬೇಕಿದ್ದ ಕಾರ್ಮಿಕ ಸಮ್ಮಾನ ಪ್ರಶಸ್ತಿಯನ್ನು ಸಹಾ ಪ್ರಧಾನ ಮಾಡಲಿಲ್ಲ, ಈ ಮಧ್ಯೆ ಕಾರ್ಮಿಕ ಸಂಘಟಕರು ಕಾರ್ಯಕ್ರಮಕ್ಕೆ ಯಾರು ಬಾರದಿದ್ದಾಗ ನಮ್ಮನ್ನು ಏಕೆ ಕರೆಸಬೇಕಿತ್ತು ಇಂದಿನ ಕೂಲಿ ಇಲ್ಲ, ಇತ್ತ ಕಡೆ ಸರ್ಕಾರದ ಸೌಲಭ್ಯವೂ ಸಹಾ ಇಲ್ಲ ಎಂದು ಆಕ್ರೋಶಗೊಂಡು ಸರ್ಕಾರ ಮತ್ತು ಕಾರ್ಯಕ್ರಮಕ್ಕೆ ಬಾರದ ಸಚಿವರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಈ ಮಧ್ಯೆ ಕಾರ್ಮಿಕರೊಬ್ಬರಿಗೆ ನಿಮಗೆ ಸಮ್ಮಾನ ಪ್ರಶಸ್ತಿ ಬಂದಿದೆ ಕಾರ್ಯಕ್ರಮಕ್ಕೆ ಬನ್ನಿ ಎಂದು ನಿನ್ನೆ ಮಧ್ಯಾಹ್ನ ದೂರವಾಣಿ ಮೂಲಕ ಆಹ್ವಾನ ಮಾಡಿದ್ದಾರೆ ನಂತರೆ ರಾತ್ರಿ ಅವರ ಮನೆಗೆ ಪೋನ್ ಮಾಡಿ ನಿಮ್ಮ ಹೆಸರು ಸನ್ಮಾನದಲ್ಲಿ ಇಲ್ಲ ಎಂದು ತಿಳಿಸಿ ಬಾರದಂತೆ ತಿಳಿಸಿದ್ದಾರೆ ಈ ರೀತಿ ಮಾಡುವುದಾದರೇ ಕಾರ್ಯಕ್ರಮ ಏಕೆ ಮಾಡಲಾಗುತ್ತದೆ ಎಂದು ಕಾರ್ಮಿಕರೊರ್ವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








