ಪಾವಗಡ;-
ತಾಲ್ಲೂಕಿನ ಕೆರೆಕುಂಟೆಗಳು ಭತ್ತಿಹೋಗಿವೆ ಬಾವಿಗಳಲ್ಲಿ, ಕೊಳವೆ ಬಾವಿಯಲ್ಲಿ ನೀರಿಲ್ಲ, ಇದರಿಂದ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದ್ದು,ಮನುಷ್ಯ ಎಲ್ಲಾದರು ಕುಡಿಯುತ್ತಾನೆ, ಆದರೆ ಮೂಕಪ್ರಾಣಿಗಳು ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದು ಮೂಕ ಪ್ರಾಣಿಗಳ ಅರಣ್ಯರೋದನೇ ಕೇಳುವವರೇ ಇಲ್ಲದಂತಾಗಿದೆ.
ಧನ,ಕುರಿ,ಮೇಕೆಗಳು ಹಸಿವುನಿಂದ ಬರದ ನಾಡಿನಲ್ಲಿ ಬರಗಾಲಕ್ಕೆ ಸಿಕ್ಕಿ ನೀರು ಮೇವು ಇಲ್ಲದೆ ಬಿರುಬಿಸಿಲಿನಲ್ಲಿ ಬಡಕಲಾದ ಮೂಗಿನ ಗೋವುಗಳು ನೆಲದದಲ್ಲಿರುವ ಹುಲ್ಲುನ್ನು ಪ್ರತಿ ನಿತ್ಯ ಹುಡಿಕಿ ತಿನ್ನುವಂತ ಪರಿಸ್ಥಿತಿ ತಲೆದೋರಿದ್ದು ಬೆಳಿಗ್ಗೆ 10 ಘಂಟೆ ದಾಟಿದರೇ ಭಯಂಕರ ಬಿಸಿಲು ಇದ್ದು ಹೊರಗಡೇ ಹೋಗಲು ಸಾದ್ಯವುಇಲ್ಲದಂತಾಗಿದೆ, ಮೇವಿಗಾಗಿ ಮೂಕ ಪ್ರಾಣಿಗಳು ಹೊಲದಲ್ಲಿರುವ ಮರಗಳ ನೆರಳಿನಲ್ಲಿ ವಿಶ್ವಾಂತಿ ಪಡೆದುಕೊಂಡು ಸಂಜೆಗೆ ಮತ್ತೆ ಕುರಿಗಾಹಿಗಳು ಮನೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೇ.
ಮೂಕ ಪ್ರಾಣಿಗಳಿಗೆ ಮೇವು ಗೋಶಾಲೆಗಳನ್ನು ತೆರೆಯ ಬೇಕಾಗಿದೆ, ತೀವ್ರ ಬರದ ಹಿನ್ನಲೆಯಲ್ಲಿ ತಾಲ್ಲೂಕಿನ ರೈತರು ಮತ್ತು ಕೂಲಿ ಕಾರ್ಮಿಕರು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ವಲಸೆ ಹೋಗಿದ್ದು,ಒಂದು ಕಡೆಯಾದರೇ ಇನ್ನೊಂದಡೆ ದನಕರುಗಳಿಗೆ ಹಾಗೂ ಕುರಿ,ಮೇಕೆ,ಎಮ್ಮೆ ಸಾಕಾಣಿಕೆ ಮೇವಿಲ್ಲದೇ ಇಲ್ಲಿನ ರೈತರು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಿದ್ದರಾಗಿದ್ದಾರೆ.
ತಾಲ್ಲೂಕಿನಲ್ಲಿ ಬರದಿಂದ ಪರಿತಪಿಸುತ್ತಿದ್ದು, ದನ-ಕರುಗಳಿಗೆ ಮೇವು ಕುಡಿಯುವ ನೀರು ಕೊರತೆಯಿದ್ದು,ಗ್ರಾಮ ಪಂಚಾಯಿತಿ ವ್ಯಾಪ್ತಿ ಬರುವ ಹಳ್ಳಿಗಳಿಗೆ ಗ್ರಾಮಗಳಲ್ಲಿ ತೋಟಿಗಳಿಗೆ ನೀರು ಬಿಟ್ಟು ಗೋವುಗಳಿಗೆ ಮತ್ತು ಎಮ್ಮೆ,ಕುರಿ,ಮೇಕೆಗಳಿಗೆ ನೀರುಣಿಸಲು ಮುಂದಾಗಬೇಕಾಗಿದೆ,ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮಳೆ ಬರುವ ಕೊನೆಯಲ್ಲಿ ತರಾತುರಿಯಾಗಿ ಮೇವು ವಿತರಣೆ ಮಾಡಿ ಕೈ ತೋಳೆದು ಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಹೆಸರಿಗಷ್ಟೆ ಬರಪೀಡಿತ ಪ್ರದೇಶವೆಂದು ಘೋಷಣೆ ವ್ಯರ್ಥ,
ರಾಜ್ಯದಲ್ಲಿ ಪಾವಗಡ ತಾಲ್ಲೂಕು ಅತಿ ಹಿಂದುಳಿದ ಬರಪೀಡಿತ ಪ್ರದೇಶವೆಂದು ಘೊಷಣೆಗೆ ಮಾತ್ರ ಸೀಮಿತವಾಗಿದ್ದು,ಇಲ್ಲಿಯವರಿಗೂ ರೈತರುಗಳಿಗೆ ಯಾವುದೆ ಸೌಲಭ್ಯ ದೊರಕಿಸಿಲ್ಲ, ಬಂದ ಸೌಲಭ್ಯಗಳೆಲ್ಲಾ ವಿದ್ಯಾವಂತರ ಹಾಗೂ ಉಳ್ಳವರ ಪಾಲಾಗುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.
ತಾಲ್ಲುಕಿನ ಭೂ ವಿಸ್ತಿರ್ಣ 143843.17 ಇದ್ದು ನಿವ್ವಳ ಸಾಗುವಳಿ 106838.51, ನೀರಾವರಿ ಸಾಗುವಳಿ ವಿಸ್ತಿರ್ಣ 14049.5, ಮಳೆ ಆಶ್ರಿತ ಭೂಮಿ 92789, ಹೊಂದಿದ್ದು,ಪಾವಗಡ ತಾಲೂಕಿನಲ್ಲಿ ಸುಮಾರು ಹತ್ತು ವರ್ಷಗಳಿಂದ ಮಳೆ ಇಲ್ಲದೆ ಬೆಳೆ ಆಗದೆ ತಾಲ್ಲೂಕಿನ ರೈತರು ಕಂಗಾಲಾಗಿದ್ದು,ತನ್ನ ಜೀವನ ಮಾಡಲು ಸಹ ಸಾಮಥ್ರ್ಯ ಇಲ್ಲದೆ ಕೈಕಟ್ಟಿ ಕುಳಿತಿದ್ದು ಕೆಲವು ರೈತರು ಸಾಲ ಸೂಲ ಮಾಡಿ ಜೀವನ ನಡೆಸುತ್ತಿದ್ದಾರೆ.
ಉದ್ಯೋಗ ವ್ಯವಸ್ಥೆ ಕಲ್ಪಿಸಲು ಕೂಲಿ ಕಾರ್ಮಿಕರ ಒತ್ತಾಯ,
ತಾಲ್ಲೂಕಿಗೆ ಬರದ ಹಿನ್ನೇಲೆಯಲ್ಲಿ ಬರದ ಅನುದಾನಡಿಯಲ್ಲಿ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದರೆ ಮಾನ್ವಿಯತೆ ಮೇರದಂದತೆ ಅಗುತ್ತದೆ. ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳು ಒಣಗಿದ್ದರೆ ಅಂತಹ ರೈತರಿಗೆ ಸರ್ಕಾರ ವೆಚ್ಚದಲ್ಲಿ ಕೊಳವೆ ಬಾವಿ ಕೊರಸಿ ಅವರ ಜೀವನ ಮಟ್ಟ ಸುಧಾರಿಬೇಕು,ಕೂಲಿ ಕಾರ್ಮಿಕರು ಬೇರೆ ಕಡೆ ವಲಸೆ ಹೋಗದಂತೆ ಕೂಲಿ ಕಾರ್ಮಿಕರಿಂದ ಕೆಲಸ ಮಾಡುಸುವಂತಹ ಕಾಮಗಾರಿಗಳನ್ನು ತಾಲ್ಲೂಕು ಮಟ್ಟದಲ್ಲಿ ಕೈಗೆತ್ತಿಕೊಳ್ಳಬೇಕಾಗಿದ್ದು,ಸಣ್ಣ ನೀರಾವರಿ ಇಲಾಖೆಗೆ ಸಂಬಂದಿಸಿದಂತೆ ಕೆರೆ ಕುಂಟೆಗಳಲ್ಲಿ ಹೂಳು ತೆಗೆಯುವಂತಹ ಕೆಲಸ ಅನುಷ್ಠಾನಕ್ಕೆ ತರಬೇಕು,ಇದರ ಪರಿರ್ಯಾಯವಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ನೀಡುತ್ತೇವೆ ಎಂದರೆ.ಸಾಲದು ಈ ಯೋಜನೆಯಲ್ಲಿ ವಾರಕ್ಕೊಮ್ಮ ಕೂಲಿ ಸಿಗುವುದಿಲ್ಲ,ಕಾರಣ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಹಿಂಜರುಗುತ್ತಿದ್ದಾರೆ,ವಾರಕ್ಕೊಮ್ಮ ಕೂಲಿ ನೀಡುವ ಯೋಜನೆ ತ್ವರಿತವಾಗಿ ಜಾರಿಗೆ ತಂದರೆ ತಾಲ್ಲೂಕಿನಲ್ಲಿ ಬರವನ್ನು ನಿಭಾಯಿಸಬಹುದೆಂದು ಕೂಲಿ ಕಾರ್ಮಿಕರ ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ.
ತಾಲ್ಲೂಕಿಗೆ ಬರದ ಹಿನ್ನೇಲೆಯಲ್ಲಿ ಕೋಟಿಗಟ್ಟಲೇ ಕಾಮಗಾರಿಗಳು ಮುಂಜೂರು ಮಾಡುಸುವುದಲ್ಲ,ಬರದ ಬವಣಿ ತಪ್ಪಿಸುವ ತನಕ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ನಿರುದ್ಯೋಗ ಯವಕರಿಗೆ ಹುದ್ದೆ ನೀಡುವಂತ ವ್ಯವಸ್ಥೆ ಕಲ್ಪಿಸಿ,ಬರ ನಿರ್ವಾರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕಾಗಿದೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣಿ ದಿನದಿಂದ ದಿನಕ್ಕೆ ಜಾಸ್ತಿ ಅಗುತ್ತಿದ್ದು,ಕೆಲ ಗ್ರಾಮಗಳಲ್ಲಿ ಅರ್ಧಕ್ಕೆ ಅರ್ಧ ಕೊಳವೆಬಾವಿಗಳು ಎತ್ತಿಟ್ಟಿದ್ದು,ಅಂತಹ ಗ್ರಾಮಗಳಿಗೆ ಜಿಲ್ಲಾಡಿಳಿತ ಆದೇಶದಂತೆ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡುತ್ತಿದ್ದು,ಕೆಲವು ಗ್ರಾಮಗಳಲ್ಲಿ ರೈತರ ಕೊಳವೆ ಬಾವಿಗಳನ್ನು ಗುತ್ತಿಗೆ ಆದಾರದ ಮೇಲೆ ಗ್ರಾಮ ಪಂಚಾಯಿತಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಕೆಲ ರೈತರು ಮಳೆ ಅಭಾವದಿಂದ ಬೇಸಾಯವನ್ನು ಮರೆತು ಸೀಮೆ ಹಸುಗಳಿಂದ ಹಾಲು ಮಾರುವ ರೂಡಿಸಿಕೊಂಡು ಜೀವನ ಸಾಗುಸುತ್ತಿದ್ದರು.ಅದರೆ ಮೇವು ಮತ್ತು ಕುಡಿಯುವ ನೀರು ಇಲ್ಲದ ಕಾರಣ ಹಸುಗಳನ್ನು ಮಾರಾಟ ಮಾಡುತ್ತಿದ್ದು,ಇನ್ನು ಕೆಲ ರೈತರು ಕುರಿಮೇಕೆ ಸಾಕಾಣಿಕೆ ಮಡುವ ರೈತರ ಸಹ ಇದೇ ರೀತಿಯಾಗಿದ್ದು,ದಿಕ್ಕೂ ತೋಚದೆ ಕಂಗಾಲಾಗಿದ್ದಾರೆ.
ಕಡಮಲಕುಂಟೆ ಗ್ರಾಮದ ಅವುಲುಆಡವಪ್ಪನಿಗೆ ಸೇರಿದ 60 ರಿಂದ 80 ಹಸುಗಳು ಇದ್ದು,ಮೇವು ಇಲ್ಲದೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಿದ್ದರಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು,ಇವರಿಗೆ ಮೇವು ನೀಡಲು ಸರ್ಕಾರವಾಗಲಿ ದಾನಿಗಳಾಗಲಿ ಸಹಾಯ ಹಸ್ತು ನೀಡುವವರು ಬೇಕಾಗಿದ್ದಾರೆ.
ಒಟ್ಟಾರೆ ಕೂಲಿ ಕಾರ್ಮಿಕರ ಹಾಗೂ ರೈತರಿಗೆ ಉದ್ಯೋಗ ಮತ್ತು ಕುಡಿಯುವ ನೀರು ವ್ಯವಸ್ಥೆ,ಮೂಕ ಪ್ರಾಣಿಗಳಿಗೆ ಮೇವು ಕುಡಿಯುವ ನೀರಿನ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಶ್ರಮಿಸಬೇಕಾಗಿದೆ.
ತಾಲ್ಲೂಕಿನ ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ ಮಳೆ ಬೆಳೆ ಇಲ್ಲದೆ ಕಾರಣ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ವಳ್ಳೂರು ಗ್ರಾ.ಪಂ,ತಿರುಮಣಿ ಗ್ರಾ.ಪಂ,ರ್ಯಾಪ್ಟೆ ಗ್ರಾ.ಪಂ ವ್ಯಾಪ್ತಿಯ ರೈತರಿಂದ ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದು ಎರಡು ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿ,ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡಲು ಅನುವು ಮಾಡಿಕೋಟ್ಟಿದ್ದಾದರು,ಇಲ್ಲಿನ ರೈತರಿಗೆ ಆಸೆ ಅಕ್ಷಾಂಕ್ಷೆ ಹುಟ್ಟಿಸಿ, ರೈತರ ಮಕ್ಕಳಿಗೆ ಹಾಗೂ ತಾಲ್ಲೂಕಿನ ನಿರುದ್ಯೋಗ ಯುವಕರಿಗೆ ಸೋಲಾರ್ ಪಾರ್ಕ್‍ನಲ್ಲಿ ಉದ್ಯೋಗ ನೀಡುವುದಾಗಿ ಈ ಹಿಂದೆ ಇದ್ದ ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆದರೆ ತಾಲ್ಲೂಕು ನಿರುದ್ಯೋಗ ಯುವಕರಿಗೂ ಉದ್ಯೋಗ ಇಲ್ಲ,ಕೆಲ ರೈತರ ಮಕ್ಕಳಿಗೂ ಉದ್ಯೋಗ ನೀಡದೇ ಆಂಧ್ರ ಮತ್ತು ಮಹಾರಾಷ್ಟ್ರ,ಗುಜರಾತ್ ಭಾಗದ ಯುವಕರಿಗೆ ಉದ್ಯೋಗ ನೀಡಿ ತಾಲ್ಲೂಕಿನ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾವಗಡ ತಾಲ್ಲೂಕಿನಲ್ಲಿ ಬರದ ಭವಣಿ ಸೃಷ್ಠಿಯಾಗಿದ್ದು,ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ,ತುಂಗಾಭಧ್ರಾ ನದಿಯ ಹಿನೀರುನಿಂದ ಶುದ್ದ ಕುಡಿಯುವ ನೀರು ಹರಿಸುವುದಾಗಿ ರಾಜ್ಯ ಸರ್ಕಾರ 2350 ಕೋಟಿ ಅನುದಾನ ಮೀಸಲು ಇಟ್ಟು ಯೋಜನೆ ಜಾರಿಗೊಳಿಸಲು ಮೀನು ಮೇಷ ಎನುಸುತ್ತಿರುವ ಉದ್ದೇಶ ಗೋತ್ತಾಗುತ್ತಿಲ್ಲ,ತಾಲ್ಲೂಕಿನ ಜನತೆ ಮತ್ತು ಸಂಘ ಸಮಸೈಎಗಳು ಸೇರಿ ನೀರಿಗಾಗಿ 33 ದಿನಗಳ ಕಾಲ ಹೋರಾಟ ಮಾಡಿದ ಫಲಾವಾಗಿ ಸರ್ಕಾರ ಆದೇಶ ನೀಡಿದರು.ಒಂದು ವರ್ಷದಿಂದ ಕಾಮಗಾರಿಗೆ ಚಾಲನೆ ನೀಡಲು ದಿನಾಂಕ ನಿಗಧಿ ಪಡೆಸುವುದಾಗಿ ಸುಳ್ಳು ಭರವಸೆಗಳು ನೀಡುತ್ತಾಳೆ ಬರುತ್ತಿದ್ದು,ಇನ್ನು ತಾಲ್ಲೂಕಿನ ತಾಳ್ಮೆಯಿಂದ ಇರಲು ಸಾಧ್ಯವಿಲ್ಲ,ಲೋಕಸಭೆ ಚುನಾವಣೆ ಮೊದಲೇ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರೆ ಮಾತ್ರ ಚುನಾವಣೆಗೆ ಸ್ವಂದಿಸುವುದಾಗಿ ಆಗ್ರಹಿದ್ದಾರೆ.
ಕರ್ನಾಟಕ ಹಸಿರು ಸೇನೆ ರೈತ ಸಂಘದ ಪಾವಗಡ ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ ಒಂದು ಕಡೆ ಕುಡಿಯುವ ನೀರಿನ ಅಭಾವ,ಒಂದೇಡೆ ದನಕರುಗಳಿಗೆ ಮೇವಿನ ಕೊರತೆ,ಇನ್ನೊಂದೇಡೆ ರೈತ ಸಾಲಕ್ಕೆ ಸಿಕ್ಕ ಕಂಗಾಲಾಗಿದ್ದು,ಕೂಲಿ ಕಾರ್ಮಿಕರಿಗೆ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗ ಇಲ್ಲದೆ ದಿಕ್ಕೂ ತೋಚದ ಪರಿಸ್ಥಿತಿ ಉಂಟಾಗಿದ್ದು,ಮಳೆ ಬೆಳೆ ಕೈಗೆ ಬರುವ ತನಕ ಸರ್ಕಾರ ಗಮನ ಹರಿಸಿ ಉದ್ಯೋಗ ಮತ್ತು ರೈತರಿಗೆ ಸಹಾಯ ಧನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಿಸಾನ್ ರೈತ ಸಂಘದ ರಾಜ್ಯಾಧ್ಯ ನಾಗಭೂಷಣರೆಡ್ಡಿ ಮಾತನಾಡಿ ಕಳೆದ 20 ವರ್ಷಗಳಿಂದ ನೀರುಗಾಗಿ ತಾಲ್ಲೂಕಿನ ವಿವಿಧ30 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಹೈಕೋರ್ಟ್ ಮೇಟ್ಟಲೇರಿದ ನದಿಯ ಮೂಲಗಳಿಂದ ಪಾವಗಡ ತಾಲ್ಲೂಕಿಗೆ ಶುದ್ದ ಕುಡಿಯುವ ನೀರು ಕೋಡಲು ಕೋರ್ಟ್ ಅದೇಶ ನೀಡಿದನಂತರ ತುತ್ರ್ತಾಗಿ ಪ್ಲೋರೈಡ್ ಘಟಕಗಳನ್ನು ಸ್ಥಾಪಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುತ್ತೇವೆ ಎಂದು ರಾಜ್ಯ ಸರ್ಕಾರ ಕೋರ್ಟ್‍ಗೆ ಮಾಹಿತಿ ನೀಡಿತ್ತು.ಮತ್ತೆ ತಾಲ್ಲೂಕಿನಲ್ಲಿ ಹಂತ ಹಂತವಾಗಿ ಹೋರಾಟ ಮಾಡಿದ ನಂತರ ರಾಜ್ಯ ಸರ್ಕಾರ 2350 ಕೋಟಿ ರೂಗಳಿಗೆ ತುಂಗಾಭಧ್ರಾ ಹಿನೀರುಗೆ ಅನುಮೊದನೆ ನೀಡಿ ಟೆಂಡರ್ ಕೆರೆದು ಗುತ್ತಿಗೆ ನೀಡಿದ್ದಾದರು ಇದುವರಿಗೂ ಶಂಕುಸ್ಥಾಪನೆ ಮಾಡಿಲ್ಲ,ಆಂಧ್ರದ ಗಡಿಭಾಗದಲ್ಲಿ ಪಾವಗಡ ಇದ್ದು,ಆಂಧ್ರ ಪ್ರದೇಶದ ಸುತ್ತು ಮುತ್ತಲು ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಕೆರೆ ತುಂಭಿಸುವ ಯೋಜನೆ ಜಾರಿಗೊಳಿಸಿದ್ದಾದರು, ಕರ್ನಾಟಕ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಪೋಟೋ;ಕಡಮಲಕುಂಟೆ ಗ್ರಾಮದ ಆವುಲುಅಡವಪ್ಪನಿಗೆ ಸೇರಿದ 60 ಕ್ಕೂ ಹೆಚ್ಚು ಹಸುಗಳು ಇದ್ದು,ಮೇವುವಿಲ್ಲದೆ ಬರದ ನೆಲೆಯಲ್ಲಿ ಮೇವಿಗೆ ಪರದಾಡುತ್ತಿರುವ ಹಸುಗಳು.